ಬೆಳಗಾವಿಯ ನಹೆರೂ ನಗರ ಬಸವಣ್ಣ, ಮಹಾದೇವ ಮಂದಿರಕ್ಕೆ ಸೋಮವಾರ ಮಹಾಂತೇಶ ಕವಟಗಿಮಠ ಮತ್ತು ಸಂಜಯ ಪಾಟೀಲ ಭೇಟಿ ನೀಡಿದರು.
ಬೆಳಗಾವಿ: ಮಹಾಶಿವರಾತ್ರಿ ಪ್ರಯುಕ್ತ ನೆಹರೂ ನಗರದಲ್ಲಿರುವ ಬಸವಣ್ಣ, ಮಹಾದೇವ ಮಂದಿರದಲ್ಲಿ ಸೋಮವಾರ ಮಹಾರುದ್ರ ಯಾಗ, ಹೋಮ ಹಾಗೂ ಮಹಾಪ್ರಸಾದ ಜರುಗಿತು.
ಬೆಳಗ್ಗೆ ಗಣೇಶ ಪೂಜೆ, ಮಹಾದೇವನಿಗೆ ಅಭಿಷೇಕ, ಮಹಾರುದ್ರ ಹೋಮಗಳಲ್ಲಿ ನೆಹರೂ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.
ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ, ಇತರ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ದೇವಸ್ಥಾನ ಮಂಡಳಿಯ ಶಿವಾಜಿ ಠಕ್, ವಿಶ್ವನಾಥ ಪಾಟೀಲ, ವಿಜಯ ಪಾಟೀಲ, ದಾದು ಪಾಟೀಲ, ಸಂಜಯ ಸುತಾರ, ದೀಪಕ ಬಿರ್ಜೆ, ಗಂಗಾಧರ ಪಾಟೀಲ, ವಿಶಾಲ ಖಂಡಾಗಳೆ, ಯಶವಂತ ಪಾಟೀಲ, ಸುರೇಶ ಕದಮ, ರವಿ ಭಾತಖಾಂಡೆ, ರೇಷ್ಮಾ ಪಾಟೀಲ ಇತರರಿದ್ದರು.