ರಾಯಬಾಗ ಪಟ್ಟಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಪ್ರಣಯ ಪಾಟೀಲ ಉದ್ಘಾಟಿಸಿದರು. ಭ್ರಮರಾಂಬಿಕಾದೇವಿ, ಬಿ.ಕೆ.ಸವಿತಾ, ಅಪ್ಪಾಸಾಹೇಬ ಮುಗಳಖೋಡ ಇತರರಿದ್ದರು. 
ಬೆಳಗಾವಿ

ಶಿವರಾತ್ರಿ ಭಕ್ತಿ ಪ್ರಧಾನ ಆಚರಣೆ

ಪ್ರಶಾಂತ ಹೂಗಾರ
ರಾಯಬಾಗ: ಮಹಾಶಿವರಾತ್ರಿ ಭಕ್ತಿ ಪ್ರಧಾನ ಹಬ್ಬವಾಗಿದೆ ಎಂದು ಬಾವನ ಸೌಂದತ್ತಿ ಓಂಕಾರ ಆಶ್ರಮದ ಮಾತೋಶ್ರೀ ಭ್ರಮರಾಂಬಿಕಾದೇವಿ ಹೇಳಿದರು.
ಪಟ್ಟಣದಲ್ಲಿ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿ ಭಗವಂತನಲ್ಲಿ ಅಚಲವಾಗಿರಬೇಕು ಎಂದು ತಿಳಿಸಿದರು.
ಘಟಪ್ರಭಾ ಸೇವಾಕೇಂದ್ರದ ಬಿ.ಕೆ.ಸವಿತಾ ಮಾತನಾಡಿ, ಜೀವನದ ಸುಖ, ಸಂತೋಷ, ಶಾಂತಿ, ನೆಮ್ಮದಿ ಕಡಿಮೆಯಾಗುತ್ತಿರುವುದು ಆತಂಕದ ವಿಷಯ. ಆಧ್ಯಾತ್ಮಿಕ ಜೀವನ ನಡೆಸುವ ಮೂಲಕ ವ್ಯಕ್ತಿತ್ವ ಹಾಗೂ ಪರಿಪೂರ್ಣ ಜೀವನ ಸಾಗಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಪ್ರಣಯ ಪಾಟೀಲ, ರಾಯಬಾಗ ಸೇವಾಕೇಂದ್ರದ ಬಿ.ಕೆ.ಪುಷ್ಪಾ ಅಕ್ಕ, ಡಿ.ಎಲ್.ಮಿರ್ಜೆ,
ಎಚ್.ಎ.ಭಜಂತ್ರಿ, ಅಪ್ಪಾಸಾಹೇಬ ಮುಗಳಖೋಡ, ಅಶೋಕ ದೇಸಿಂಗೆ, ಬಿ.ಎಂ.ಮಾಳಿ, ಅಮೋಘ ನಾಯಿಕ, ಲಗಮಣ್ಣ ಪಾಟೀಲ ಇತರರಿದ್ದರು.