ಶಿವನೂರ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಶಿವಪುತ್ರ ಬೇವನೂರ, ರಾಘವೇಂದ್ರ ನುಲಿ, ಮಹಾದೇವ ಉಳಾಗಡ್ಡಿ ಇವರನ್ನು ಸನ್ಮಾನಿಸಲಾಯಿತು. ಅಪ್ಪಾಸಾಹೇಬ ಕಿರನಗಿ, ಅಶೋಕ ಕಿರನಗಿ ಇತರರಿದ್ದರು.
ಸಂಬರಗಿ: ಶಿವನೂರ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಖಾಲಿಯಿದ್ದ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಶಿವಪುತ್ರ ಬೇವನೂರ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ರಾಘವೇಂದ್ರ ನೂಲಿ ಶುಕ್ರವಾರ ಘೋಷಿಸಿದರು.
ಬ್ಯಾಂಕ್ ನಿರೀಕ್ಷಕ ಮಹಾದೇವ ಉಳಾಗಡ್ಡಿ, ಸಂಘದ ಉಪಾಧ್ಯಕ್ಷ ಹೂವಣ್ಣ ಮಾನೆ, ಸಂಘದ ನಿರ್ದೇಶಕ ಅಪ್ಪಾಸಾಹೇಬ ಕಿರನಗಿ, ಅಶೋಕ ಕಿರನಗಿ, ಸಂಭಾಜಿ ವಾಘಮೋಡೆ, ರೋಹಿತ ಮಗದುಮ್ಮ, ರಾವಸಾಹೇಬ ಘುಗರಿ, ಪಂಡಿತ ಕಾಂಬಳೆ, ಸುಖದೇವ ಸನದಿ, ಅವ್ವನ್ನ ಕಲ್ಲಪ್ಪ ವಾಗರೆ, ಸರಸ್ವತಿ ಆಜೂರು, ರೇಖಾ ಬಿರಾದಾರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ಆಜೂರು, ಶ್ರೀಶೈಲ ಪಾಟೀಲ, ಕಾವೇರಿ ಕೋಳಿ, ತಮಣ್ಣ ಪೂಜಾರಿ, ಅಪ್ಪಾಸಾಹೇಬ ಮಾಳಿ, ಅಣ್ಣಾಸಾಹೇಬ ಅಡಹಳ್ಳಿ, ಬಿ.ಬಿ.ಆಜೂರು, ಕರಣ ಬೇವನೂರ, ಅಪ್ಪಾಸಾಹೇಬ ಮಾಳಿ, ಪರಪ್ಪ ಬೇವನೂರ, ಗುರುಪುತ್ರ ಬೇವನೂರ, ಅಣ್ಣಾಸಾಹೇಬ ಮಾನೆ ಇತರರಿದ್ದರು.