ಬಾಡಗಿಯಲ್ಲಿ ಹನುಮಾನ ದೇವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಓಟದ ಸ್ಪರ್ಧೆಗೆ ಗಣ್ಯರು ಚಾಲನೆ ನೀಡಿದರು. ಚಂದ್ರಶೇಖರ ಚಿಕ್ಕೋಡಿ, ಅಣ್ಣಪ್ಪ ಕಾಗವಾಡ, ಸಿದ್ದು ಮಮದಾಪುರ ಇತರರಿದ್ದರು. 
ಬೆಳಗಾವಿ

ಓಟದಲ್ಲಿ ಶಿವಾನಂದ ಚಿಗರಿಗೆ ಪ್ರಥಮ ಸ್ಥಾನ

ಅರಟಾಳ: ಸಂಗ್ರಾಮ ಕಲ್ಲು, ಚೀಲ ಎತ್ತುವುದು, ಕುಸ್ತಿ ಸ್ಪರ್ಧೆಗಳನ್ನು ನೋಡುವುದು ಅಪರೂಪವಾಗಿದೆ. ಮಕ್ಕಳಿಗೆ ಸಂಸ್ಕಾರ ಜತೆಗೆ ಗುಣಮಟ್ಟದ ಶಿಕ್ಷಣ ಕೂಡುವ ಜವಾಬ್ದಾರಿ ಪಾಲಕರದ್ದಾಗಿದೆ ಎಂದು ಸಿಪಿಐ ಚಂದ್ರಶೇಖರ ಚಿಕ್ಕೋಡಿ ಹೇಳಿದರು.
ಸಮೀಪದ ಬಾಡಗಿ ಗ್ರಾಮದಲ್ಲಿ ಹನುಮಾನ ದೇವರ ಜಾತ್ರೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಮನೆಯ ಮಕ್ಕಳಿಗೆ ಜಂಕ್‌ುಡ್ ತಿನ್ನಿಸದೇ ಹಾಲು, ತುಪ್ಪ ಉಣಿಸಬೇಕು ಎಂದರು.
ಬಡಚಿಯ ಶಿವಾನಂದ ಚಿಗರಿ ಪ್ರಥಮ, ಅರಟಾಳದ ಅಜಿತ ದಮಡಿ ದ್ವಿತೀಯ, ಬಿದರಿಯ ಕುಮಾರ ಮಳಗಾನಿ ತೃತೀಯ, ಲಕ್ಷ್ಮಣ ನಾಟೀಕರ ಚತುರ್ಥ ಬಹುಮಾನ ಪಡೆದರು.
ಪಿಎಸ್‌ಐ ಅಣ್ಣಪ್ಪ ಕಾಗವಾಡ, ಸಿದ್ದು ಮಮದಾಪುರ, ಶ್ರೀಶೈಲ ಬಿರಾದಾರ, ಅಶೋಕ ಮುಧೋಳ, ಮಹಾದೇವ ಚಿಕ್ಕೋಡಿ, ಶ್ರೀಶೈಲ ಬಿರಾದಾರ, ಗುಂಡಪ್ಪ ಬಿರಾದಾರ, ರಾಘವೇಂದ್ರ ಜಂಬಗಿ, ಶಿವರಾಯ ಮಾದರ, ಚನ್ನಪ್ಪ ಮುಧೋಳ, ಮಲ್ಲಿಕಾರ್ಜುನ ಹುದ್ದಾರ, ನಿಲ್ಲಪ್ಪ ಗೀರಗೊಂಡ, ಸಂಗಮೇಶ ಹಿಪ್ಪರಗಿ, ಶರಣು ಕರಿಗಾರ, ಸದಾಶಿವ ನಾಟೀಕರ, ಲಕ್ಷ್ಮಣ ನಾಟೀಕರ, ರಮೇಶ ಜಂಬಗಿ ಇತರರಿದ್ದರು.