ಮುರಗೋಡದ ಕೆಂಗೇರಿಯಲ್ಲಿ ಶ್ರೀ ಶಿವಚಿದಂಬರೇಶ್ವರ ಮಹಾರಥೋತ್ಸವ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ಜರುಗಿತು.
ಮುರಗೋಡ
ಜಾತ್ರಾ ಉತ್ಸವ ನಿಮಿತ್ತ ಧ್ವಜಾರೋಹಣ, ಯಜ್ಞಮಂಟಪ ಪ್ರವೇಶ, ದೇವತಾ ಸ್ಥಾಪನೆ, ಹೋಮ-ಹವನ ಸೇರಿ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿದವು.
ರಥದಲ್ಲಿ ಶಿವಚಿದಂಬರೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಭಕ್ತರು ತೆಂಗಿನಕಾಯಿ, ಬಾಳೆಹಣ್ಣು, ಖಾರಿಕು, ಹೂ ಪತ್ರಿ ಅರ್ಪಿಸಿದರು. ಮಾತೆ ಮಥುರಾ, ಗುರುಮಾತೆ ಯಮುನಾ, ಪಾಂಡುರಂಗ ದಿಕ್ಷೀತ, ಪ್ರಭಾಕರ ದಿಕ್ಷೀತ, ಚಿದಂಬರ ತೊರಗಲ್ಲ, ಗುಂಡೂರಾವ ಕುಲಕರ್ಣಿ, ಪಂಢರಿನಾಥ ಜೋಷಿ, ರಮೇಶ ದೇಶಪಾಂಡೆ, ಮುರಳೀಧರ ಹುಲ್ಲೂರ, ಎಚ್.ಬಿ.ರಗಟಿ, ಡಾ.ಎನ್.ಎಂ.ಪಾಟೀಲ, ನರಸಿಂಗರಾವ ಸೋಮಲಾಪೂರ, ಮಹಾಂತೇಶ ದಾಡಿಗುಂಡಿ ಇತರರಿದ್ದರು.