ಹಲಗತ್ತಿ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆ ಜರುಗಿತು.
ರಾಮದುರ್ಗ: ಮಲ್ಲಮ್ಮ ಸೀ ಕುಲಕ್ಕೆ ಆದರ್ಶ ಗೃಹಿಣಿಯಾಗಿ ಲೌಕಿಕ ಸಾಧನೆಯೊಂದಿಗೆ, ಪಾರಮಾರ್ಥಿಕ ಸ್ವಚಾರಗಳನ್ನು ಇಂದಿನ ಸಮಾಜಕ್ಕೆ ಬಿಟ್ಟು ಹೋಗಿದ್ದಾರೆ. ಅವರ ಆದರ್ಶದ ಜೀವನ ಇಂದಿನ ಜನತೆಗೆ ದಾರಿದೀಪವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ವೆಂಕಟೇಶ ಹುಣಶೀಕಟ್ಟಿ ಹೇಳಿದರು.
ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಹೇಮ-ವೇಮ ಸೇವಾ ಸಮಿತಿ ಆಶ್ರಯದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ರಡ್ಡಿ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಹೇಮ-ವೇಮ ರಡ್ಡಿ ಸಮಾಜದ ಅಧ್ಯಕ್ಷ ಪ್ರವೀಣ ನಂದೆಪ್ಪನವರ, ಬಾಲಪ್ಪ ರುದ್ರಗೌಡ್ರ, ರವಿ ಗಲಿಬಿ, ಶ್ರೀನಿವಾಸ ದ್ಯಾವಣ್ಣವರ, ಬಸು ನಡಮನಿ, ಗೋವಿಂದಪ್ಪ ಅಂಬಲಜೇರಿ, ಕೀರಗೌಡ್ರು, ಬಸನಗೌಡ ರುದ್ರಗೌಡ, ಬಿ.ಎಸ್.ಮುಳ್ಳೂರ, ಮಂಜು ಮುಧೋಳ, ರಂಗಪ್ಪ ನಡಮನಿ, ಲಕ್ಷ್ಮಣ ಹೂಗಾರ, ಹನುಮಂತ ಹೂಗಾರ, ಹನುಮಂತ ಹೊಸಕೋಟಿ ಇತರರಿದ್ದರು.