ಸಾವು 
ಬೆಳಗಾವಿ

ಸಿಡಿಲು ಬಡಿದು ಕುರಿಗಾಹಿ ಸಾವು

ಧರ್ಮರಾಜ ರಾಮನಗೌಡ ಪಾಟೀಲ
ನರಗುಂದ: ಸಿಡಿಲು ಬಡಿದು ಕುರಿಗಾಹಿ ಯುವಕ ಮೃತಪಟ್ಟು, ರೈತ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಜಗಾಪುರ ಒಳರಸ್ತೆಯಲ್ಲಿ ಬುಧವಾರ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದ ಮಾರುತಿ ಮಾಡಗೆಪ್ಪ ಕುರಿ (22) ಮೃತಪಟ್ಟವ.
ನರಗುಂದ ಹಾಲಭಾವಿಕೇರಿ ಓಣಿಯ ರೈತ ನಿಂಗಪ್ಪ ಸಿಂಗಾಡೆಪ್ಪ ಮಜ್ಜಗಿ (43) ಎಂಬುವವರಿಗೆ ಬೆನ್ನು, ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ: ಹಿರೇಮೂಲಂಗಿ ಗ್ರಾಮದ ನಿವಾಸಿ ಮಾರುತಿಯವರು ಕಳೆದೊಂದು ತಿಂಗಳ ಹಿಂದೆ ಕುರಿ ಮೇಯಿಸುತ್ತ ನರಗುಂದ ತಾಲೂಕಿಗೆ ಆಗಮಿಸಿದ್ದರು. ಬುಧವಾರ ಮಧ್ಯಾಹ್ನ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಗುಡುಗು, ಸಿಡಿಲು, ಬಿರುಗಾಳಿ ಸಮೇತ ಕೆಲಹೊತ್ತು ಧಾರಾಕಾರ ಮಳೆ ಸುರಿಯಿತು.
ಈ ವೇಳೆ ಮರದ ಕೆಳಗೆ ನಿಂತಿದ್ದ ಮಾರುತಿಗೆ ಸಿಡಿಲು ಬಡಿದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಜಮೀನಿನ ಉಳುಮೆಗೆ ತೆರಳಿದ್ದ ರೈತ ನಿಂಗಪ್ಪ ಹಾಗೂ ಟ್ರ್ಯಾಕ್ಟರ್ ಚಾಲಕ ವಿಠ್ಠಲ ತೋರಗಲ್ಲ ಅದೃಷ್ಟವಶಾತ್ ಬದುಕುಳಿದಿದ್ದಾರೆ. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.