ಕೋಹಳ್ಳಿ ಸಂಗಮೇಶ್ವರ ವಿವಿಧೋದ್ದೇಶ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ಶೌಕತ್‌ಅಲಿ ಡೊಂಗರಗಾಂವ ಹಾಗೂ ಉಪಾಧ್ಯಕ್ಷರಾಗಿ ಶಿವನವ್ವ ಡಂಬಳಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ರೇವಣ್ಣಸಿದ್ಧ ಸತ್ತಿ, ಸುವರ್ಣಾ ಝರೆ, ಸುರೇಶ ಬಿಳಗುಂಡಿ, ರಾಮು ತಳವಾರ ಇತರರಿದ್ದರು. 
ಬೆಳಗಾವಿ

ಶೌಕತ್‌ಅಲಿ ಅಧ್ಯಕ್ಷ, ಶಿವನವ್ವ ಉಪಾಧ್ಯಕ್ಷೆ

ಕೋಹಳ್ಳಿ: ಶ್ರೀ ಸಂಗಮೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಶೌಕತ್‌ಅಲಿ ಡೊಂಗರಗಾಂವ ಹಾಗೂ ಉಪಾಧ್ಯಕ್ಷರಾಗಿ ಶಿವನವ್ವ ಡಂಬಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎನ್.ನೂಲಿ ಹೇಳಿದರು.
ಇಲ್ಲಿನ ಸಂಗಮೇಶ್ವರ ವಿವಿಧೋದ್ದೇಶಗಳ ಪಿಕೆಪಿಎಸ್ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. 12 ನಿರ್ದೇಶಕ ಪೈಕಿ 7 ನಿರ್ದೇಶಕರು ಪಾಲ್ಗೊಂಡಿದ್ದರು. ಸಹಾಯಕ ಚುನಾವಣಾ ಅಧಿಕಾರಿಯಾಗಿ ಮುಖ್ಯಕಾರ್ಯನಿರ್ವಾಹಕ ಜಯವಂತ ಅಜಟರಾವ ಕಾರ್ಯನಿರ್ವಹಿಸಿದರು.
ನಿರ್ದೇಶಕರಾದ ರೇವಣಸಿದ್ಧ ಸತ್ತಿ, ಸುವರ್ಣಾ ಝರೆ, ಸುರೇಶ ಬಿಳಗುಂಡಿ, ರಾಮು ತಳವಾರ, ಸದಾಶಿವ ಸರಗರ, ಹಿರಿಯರಾದ ನೂರಅಹಮ್ಮದ್ ಡೊಂಗರಗಾಂವ, ಸದಾಶಿವ ಹರಪಾಳೆ, ಶ್ರೀಕಾಂತ ಆಲಗೂರ, ಸಹದೇವ ಸೂರ್ಯವಂಶಿ, ತುಕಾರಾಮ ಡತಾರೆ, ಸಿಕಂದರ್ ಮುಜಾವರ, ಕೇದಾರಿ ವಳಸಂಗ, ದಿಲೀಪ ಮರಗಾಳೆ, ಹನುಮಂತ ಭಜಂತ್ರಿ, ಶಿವಗೌಡ ಮುಧೋಳ, ಸುರೇಶ ಅವತಾಡೆ, ಸೈಬಣ್ಣ ಪೂಜಾರಿ, ಬಂದುಸಾಬ್ ಮುಜಾವರ, ನಿಂಗಪ್ಪ ಮಿರ್ಜಿ, ಬದ್ರುದ್ದೀನ್ ಡೊಂಗರಗಾಂವ, ಬೈಜು ಮರಗಾಳೆ ಇತರರಿದ್ದರು.