ಸವದತ್ತಿ ತಹಸೀಲ್ದಾರ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಹೆಗ್ಗಣ್ಣವರ ಶಂಕರಾಚಾರ್ಯರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉದ್ಯಮಿ ಅಶ್ವತ್ಥ ವೈದ್ಯ, ಗಿರೀಶ ಮನೋಳಿ, ಹಣಮಂತ ಟಕ್ಕಳಕಿ, ಶೇಷಗಿರಿ ಜೋಶಿ ಇತರರಿದ್ದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆದಿಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಯಮಿ ಅಶ್ವತ್ಥ ವೈದ್ಯ ಮಾತನಾಡಿ, ಶಂಕರಾಚಾರ್ಯರ ಉಪದೇಶ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ. ಧಾರ್ಮಿಕ ಸಮನ್ವಯದ ಅಗತ್ಯ ಒತ್ತಿ ಹೇಳುತ್ತವೆ ಎಂದರು.
ಬ್ರಾಹ್ಮಣ ಸಮಾಜದ ನಗರ ಅಧ್ಯಕ್ಷ ಗಿರೀಶ ಮನೋಳಿ, ಹಣಮಂತ ಟಕ್ಕಳಕಿ, ಶೇಷಗಿರಿ ಜೋಶಿ, ರಾಮಚಂದ್ರ ಜೋಶಿ, ಧೀರೇಂದ್ರ ಕನಡೆ, ಸದಾನಂದ ದೀಕ್ಷಿತ, ಬಂಡೂರಾವ ಕುಲಕರ್ಣಿ ಇತರರಿದ್ದರು.