ಬೆಳಗಾವಿ: ಗೋಕಾಕ ನಗರದಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಅಪ್ರಾಪ್ತ ಸೇರಿ ಏಳು ಜನ ದರೋಡೆಕೋರರನ್ನು ಬಂಧಿಸಿದ ಪೊಲೀಸರು, 12 ಸಾವಿರ ರೂ. ನಗದು ಇತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಗೋಕಾಕ ನಗರದ ಆಕಾಶ ತಳವಾರ, ರಾಮಸಿದ್ಧ ತೋಳಿ, ರಿತೇಶ ಫಕೀರೆ, ನಾಗರಾಜ ತೋಳಿ, ಗೋಪಾಲ ತೋಳಿ, ಸಿದ್ಧಪ್ಪ ಕುರಬನ್ನವರ ಹಾಗೂ ಅಪ್ರಾಪ್ತ ಬಂಧಿತರು. ಗೋಕಾಕ ತಾಲೂಕಿನ ಚಿಗಡೊಳ್ಳಿ ಗ್ರಾಮದ ರಾಮಚಂದ್ರರಾವ್ ೂರ್ಪಡೆ ಅವರು ಮಾ.13ರಂದು ಮಧ್ಯರಾತ್ರಿ ಗೋಕಾಕ ನಗರದ ಖತೀಬ್ ಮಸೀದಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆರು ಜನರು ಅಡ್ಡಗಟ್ಟಿ ಬೆದರಿಕೆ ಹಾಕಿ 16 ಗ್ರಾಂ ಬಂಗಾರ ಚೈನ್, ಲಾಕೇಟ್ ಕಿತ್ತು ಪರಾರಿಯಾಗಿದ್ದರು. ಈ ಕುರಿತು ಮಾ.17ರಂದು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.