ಘಟನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದುರ್ಗಾದೇವಿ ದೇವಸ್ಥಾನದ ಕಲಶಾರೋಹಣ ಸಮಾರಂಭದಲ್ಲಿ ಶ್ರೀಗಳನ್ನು ಸನ್ಮಾನಿಸಲಾಯಿತು. ಶಿವಶರಣಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ನರಸಿಂಗ ಮೋಹಿತೆ, ಬಸಪ್ಪ ಚಿಮ್ಮಡ, ಗುರಪ್ಪ ತೇಲಿ ಇತರರಿದ್ದರು. 
ಬೆಳಗಾವಿ

ಸಂಸ್ಕಾರದಿಂದ ಸ್ವಾವಲಂಬಿ ಬದುಕು

ಅಥಣಿ ಗ್ರಾಮೀಣ: ಇಂದಿನ ದಿನಗಳಲ್ಲಿ ಕುಟುಂಬಗಳಲ್ಲಿ ಏಕತೆ ಕಡಿಮೆಯಾಗುತ್ತಿದೆ. ಹಣದಿಂದ ಮಾತ್ರ ಸಂತೋಷ ಸಿಗುವುದಿಲ್ಲ. ಕುಟುಂಬದ ಒಗ್ಗಟ್ಟು, ಪರಸ್ಪರ ಪ್ರೀತಿ ಮತ್ತು ಗೌರವ ನೆಮ್ಮದಿಗೆ ಕಾರಣ ಎಂದು ಚಿಕಾಲಗುಂಡಿ ಶಿವಶರಣಾನಂದ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದುರ್ಗಾದೇವಿ ದೇಗುಲ ಕಲಶಾರೋಹಣ ಸಮಾರಂಭದ ಮಾತನಾಡಿ, ಹಣ, ಆಸ್ತಿ, ಅಂತಸ್ತು, ಬಂಗಾರ, ಬೆಳ್ಳಿ ಗಳಿಸುವ ವ್ಯಾಮೋಹಕ್ಕೆ ಹೋಗದೆ. ಕೃಷಿ ಕಾಯಕದಲ್ಲಿ ತೊಡಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸ್ವಾವಲಂಬಿಯಾಗಿ ಬದುಕಬೇಕು ಎಂದರು.
ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಮೌಲ್ಯಗಳು ದೀರ್ಘಕಾಲಿಕ ಪ್ರತಿಲ ತೋರಿಸುತ್ತವೆ. ಜೀವನವನ್ನು ಸಂತೃಪ್ತಗೊಳಿಸುತ್ತವೆ ಎಂದರು. ಕೌಲಗುಡ್ಡದ ಅಮರೇಶ್ವರ ಮಹಾರಾಜರು ಕಲಶಾರೋಹಣ ನೇರವೇರಿಸಿದರು. ನರಸಿಂಗ ಮೋಹಿತೆ, ಬಸಪ್ಪ ಚಿಮ್ಮಡ, ಗುರಪ್ಪ ತೇಲಿ, ಶಂಕರ ಕೋಳಿ, ಹನುಮಂತ ಗಲಗಲಿ, ವಿರೇಶ ಹಿರೇಮಠ, ಯಲ್ಲಪ್ಪ ಕಲಾಲ, ಮುರಗಯ್ಯ ಇಟ್ನಾಳಮಠ, ಭಾವುರಾಜ ಗೌಡಪ್ಪನವರ, ಶ್ರೀಪತಿ ಭೋಸಲೆ, ಮಲಿಕ್ ಮುಲ್ಲಾ, ಹನುಮಂತ ಕೋಳಿ, ಬಸಪ್ಪ ಕಾಳೆ, ಪಿಡಿಒ ಬಸವರಾಜ ಹೊನಕಾಂಬಳೆ ಇತರರಿದ್ದರು. ಅನಿಲ ಗಲಗಲಿ ಸ್ವಾಗತಿಸಿದರು. ಬಸವರಾಜ ಗಲಗಲಿ ನಿರೂಪಿಸಿದರು.