ನಿಪ್ಪಾಣಿಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ಸೃಜನಾತ್ಮಕ ಸ್ಪರ್ಧಾ ಮಹೋತ್ಸವ ಪ್ರದರ್ಶನ ಕಾರ್ಯಕ್ರಮಕ್ಕೆ ಕೆಎಲ್‌ಇ ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ ಚಾಲನೆ ನೀಡಿದರು. ಪ್ರವೀಣ ಬಾಗೇವಾಡಿ, ಡಾ.ಶಂಕರಗೌಡ ಪಾಟೀಲ, ಡಾ.ಎಂ.ಎಂ.ಹುರಳಿ, ಹೇಮಾ ಚಿಕ್ಕಮಠ, ಡಾ.ಎ.ಎ.ಕಾಂಬಳೆ ಇದ್ದಾರೆ. 
ಬೆಳಗಾವಿ

ಅಭಿವೃದ್ಧಿಗೆ ವಿಜ್ಞಾನ ದಾರಿದೀಪ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಮಹಾಂತೇಶ ಕವಟಗಿಮಠ ಅನಿಸಿಕೆ
  • ಸೃಜನಾತ್ಮಕ ಸ್ಪರ್ಧಾ ಮಹೋತ್ಸವ ಪ್ರದರ್ಶನ
ನಿಪ್ಪಾಣಿ: ವಿಜ್ಞಾನ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಚಿಂತನೆ, ಸಂಶೋಧನಾ ಮನೋಭಾವ, ಆವಿಷ್ಕಾರ ಶಕ್ತಿ ಹಾಗೂ ಸೃಜನಶೀಲತೆ ಹಚ್ಚಿಸುವ ವೇದಿಕೆಯಾಗಿದೆ. ವಿಜ್ಞಾನ ನಾಗರಿಕ ಸಮಾಜದ ಅಭಿವೃದ್ಧಿಗೆ ದಾರಿದೀಪವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ `ಅದ್ವಿತೀಯಂ' ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸೃಜನಾತ್ಮಕ ಸ್ಪರ್ಧಾ ಮಹೋತ್ಸವ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮಾನವನ ಜೀವ ಉಳಿಸಿದ ನಂಬಿಕೆಯ ದೀಪವಾಗಿದ್ದನ್ನು ಕೋವಿಡ್ ಕಾಲಾವಧಿ ರುಜುವಾತುಪಡಿಸಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಆನ್‌ಲೈನ್ ತರಗತಿ, ಇ-ಲರ್ನಿಂಗ್, ಇ-ಲೈಬ್ರರಿ ಮುಂತಾದ ಸೌಲಭ್ಯಗಳು ತಂತ್ರಜ್ಞಾನದ ಪ್ರತಿಫಲವಾಗಿದೆ. ತಂತ್ರಜ್ಞಾನ ನಮ್ಮನ್ನು ನಿಯಂತ್ರಿಸುವುದಕ್ಕೆ ಅವಕಾಶ ಕೊಡದಂತೆ ಜಾಣ್ಮೆಯಿಂದ ಬಳಸಬೇಕು. ವಿಜ್ಞಾನದಿಂದ ಸಮಾಜ, ರಾಷ್ಟçದ ಪ್ರಗತಿ ಸಾಧಿಸಿ ಮಾನವ ಮೌಲ್ಯ ಬಲಪಡಿಸಬೇಕು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಎಂ. ಹುರಳಿ ಮಾತನಾಡಿ, ಮಹಾವಿದ್ಯಾಲಯದ ಸಾಧನೆಗಳು, ವಿದ್ಯಾರ್ಥಿಗಳು ಪಡೆದ ವಿವಿಧ ಪ್ರಶಸ್ತಿಗಳು ಸಂಸ್ಥೆಗೆ ಹೆಮ್ಮೆ ತಂದಿವೆ ಎಂದರು. ಕೆಎಲ್‌ಇ ಸಂಸ್ಥೆ ನಿರ್ದೇಶಕ ಪ್ರವೀಣ ಬಾಗೇವಾಡಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಡಾ.ಶಂಕರಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಎಂ.ಬಿ.ಕೋಥಳಿ, ಡಾ.ಬಿ.ಎಸ್.ಕಾಂಬಳೆ, ಕಾರ್ಯಕ್ರಮ ಸಂಯೋಜಕಿ ಅಶ್ವಿನಿ ಕಿಲ್ಲೇದಾರ, ಪ್ರೊ.ಶಂಕರಮೂರ್ತಿ ಕೆ.ಎನ್., ಡಾ.ಎಸ್.ಎಂ.ರಾಯಮಾನೆ, ಶಿವಲಿಂಗ ನಾಯಿಕ, ಪಿಯು ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಗೀತಾ ಕಮತೆ, ನಮಿತಾ ನಾಯಿಕ, ಐಕ್ಯೂಎಸಿ ಸಂಯೋಜಕ ಡಾ.ಎ.ಎ.ಕಾಂಬಳೆ ಇತರರಿದ್ದರು.
ವಿಜೇತರಿಗೆ ಬಹುಮಾನ
ಶಾಲಾ ಮತ್ತು ಕಾಲೇಜುಗಳಿಂದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ೧೮೨ ತಂಡ, ಜನಪದ ನೃತ್ಯ ಸ್ಪರ್ಧೆಯಲ್ಲಿ ೨೮ ತಂಡ, ಪ್ರಶ್ನೋತ್ತರ ಸ್ಪರ್ಧೆಯಲ್ಲಿ ೩೪ ತಂಡ ಪಾಲ್ಗೊಂಡಿದ್ದವು. ವಿದ್ಯಾರ್ಥಿಗಳು ವೈವಿಧ್ಯಮಯ ವಿಜ್ಞಾನ ಮಾದರಿ ಪ್ರದರ್ಶಿಸಿದರು. ಸ್ಪರ್ಧೆಗಳ ವಿಜೇತರಿಗೆ ಅನುಕ್ರಮವಾಗಿ ೧೦,೦೦೦, ೭,೦೦೦, ೫ ಸಾವಿರ ರೂ. ಬಹುಮಾನ ನೀಡಲಾಯಿತು.