ಡಾ.ಹನುಮೇಶ ದುಡ್ಯಾಳ, ರಾಜಶೇಖರ ಕೋತಂಬ್ರಿ, ಡಾ.ವಿಠ್ಠಲ ಮಾನೆ, ಡಾ.ಬಸವರಾಜ ಡಿ. ಇತರರಿದ್ದರು. 
ಬೆಳಗಾವಿ

ಶಾಲಾ ಸಂಸ್ಥಾಪನಾ ದಿನಾಚರಣೆ ಮಾದರಿ

ರಾಘವೇಂದ್ರಗೌಡ ಭೀ ಪಾಟೀಲ್
ಬೈಲಹೊಂಗಲ: ರಕ್ತದಾನ ಮಾಡುವುದರಿಂದ ಸಂಕಷ್ಟದಲ್ಲಿರುವ ಜನರಿಗೆ ಜೀವದಾನ ಮಾಡಿದ ಸಾರ್ಥಕ್ಯ ಲಭಿಸುತ್ತದೆ ಎಂದು ಪ್ರಾಚಾರ್ಯ ಡಾ.ಹನುಮೇಶ ದುಡ್ಯಾಳ ಹೇಳಿದರು.
ಕಲ್ಪವೃಕ್ಷ ಮಾದರಿ ಶಾಲೆಯ 18ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ಹಾಗೂ ರಕ್ತ ಭಂಡಾರದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗುತ್ತದೆ. ಸಂಸ್ಥೆಯ ಅಧ್ಯಕ್ಷೆ ಮಂಗಳಾ ಬಾಬು ಢಮ್ಮಣಗಿ ಅವರ ಮಾರ್ಗದರ್ಶನದಲ್ಲಿ ರಕ್ತದಾನ ಶಿಬಿರದ ಮೂಲಕ ಶಾಲಾ ಸಂಸ್ಥಾಪನಾ ದಿನಾಚರಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ, ಕೆಎಲ್‌ಇ ರಕ್ತ ಬಂಢಾರದ ವೈದ್ಯಾಧಿಕಾರಿ ಡಾ.ವಿಠ್ಠಲ ಮಾನೆ, ಡಾ.ಬಸವರಾಜ ಡಿ., ಡಾ.ಸಮೃದ್ಧ, ಪಿಆರ್‌ಒ ರಮೇಶ ಸೇರಿದಂತೆ 13 ತಂಡ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದರು. ಶಿಕ್ಷಕರು, ಪಾಲಕರು ಹಾಗೂ ಸಿಬ್ಬಂದಿ ಸೇರಿದಂತೆ 52 ಜನ ರಕ್ತದಾನ ಮಾಡಿದರು.
ಸಹಾಯಕ ಆಡಳಿತಾಧಿಕಾರಿ ಉಮೇಶ ಗಡತರನವರ, ಶಾಲಾ ಸಂಯೋಜಕಿಯರು ಇತರರಿದ್ದರು.
ಬೈಲಹೊಂಗಲ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ಹಾಗೂ ರಕ್ತ ಭಂಡಾರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರುಗಿತು.