ಬೈಲಹೊಂಗಲ ಚಾಂಪಿಯನ್ಸ್ ಟ್ರೋಫಿ 2026 ಸೀಜನ್-1 ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯದಲ್ಲಿ ವಿಜೇತರಾದ ಸವದತ್ತಿಯ ಅಗಸ್ತ್ಯ-11 ತಂಡಕ್ಕೆ ಶಾಸಕ ಮಹಾಂತೇಶ ಕೌಜಲಗಿ ಬಹುಮಾನ ವಿತರಿಸಿದರು. ಮಹಾಂತಯ್ಯ ಆರಾದ್ರಿಮಠ, ಮಹಾಂತೇಶ ತುರಮರಿ, ಮಹೇಶ ಬೆಲ್ಲದ ಇತರರು ಇದ್ದರು. 
ಬೆಳಗಾವಿ

ಸವದತ್ತಿಯ ಅಗಸ್ತ್ಯ-11 ತಂಡ ಚಾಂಪಿಯನ್

ತೀವ್ರ ಪೈಪೋಟಿ ನೀಡಿದ ಬೈಲಹೊಂಗಲದ ನಿಲ್ ಬಾಯ್ಸ ತಂಡ ರನ್ನರ್-ಅಪ್ ಸ್ಥಾನ ಪಡೆದು 1,50,000 ರೂ. ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿತು. ಪಂದ್ಯದ ಅಂತ್ಯದಲ್ಲಿ ಆಯೋಜಕರು ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ಟ್ರೋಫಿ, ನಗದು ಬಹುಮಾನ ಹಾಗೂ ಸ್ಮರಣಿಕೆ ವಿತರಿಸಲಾಯಿತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಯಿತು. ಫೈನಲ್ ಪಂದ್ಯದಲ್ಲಿ ಪ್ರೇಕ್ಷಕರು ಆಟಗಾರರನ್ನು ಹುರಿದುಂಬಿಸಿ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಪಂದ್ಯಾನಂತರ ಕ್ರೀಡಾಪಟುಗಳನ್ನು ಅಭಿನಂದಿಸಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳ ಆಯೋಜನೆ ಯುವಕರಲ್ಲಿ ಕ್ರೀಡಾಸಕ್ತಿಯನ್ನು ಹೆಚ್ಚಿಸುವುದರ ಜತೆಗೆ ಪ್ರತಿಭೆಯನ್ನು ಹೊರತರುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು. ಪಂದ್ಯದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯಾವಳಿಯಲ್ಲಿ ನಗರ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ 24 ತಂಡಗಳು ಭಾಗವಹಿಸಿದ್ದವು.
ಯುವ ಮುಖಂಡ ಬಸವರಾಜ ಕೌಜಲಗಿ, ಚಿತ್ರನಟ ಶಿವರಂಜನ ಬೋಳನ್ನವರ, ಮಹಾಂತೇಶ ತುರಮರಿ, ವೇಮೂ. ಡಾ.ಮಹಾಂತಯ್ಯ ಆರಾದ್ರಿಮಠ, ಮುಖಂಡರಾದ ಮಹೇಶ ಬೆಲ್ಲದ, ಬಿ.ಆರ್.ಪಾಟೀಲ, ಮಹೇಶ ಹೂಲಿ, ಶಂಕರಗೌಡ ಪಾಟೀಲ, ಅನೀಶ ಕೌಜಲಗಿ, ಆದಿರಾಜ ಕೌಜಲಗಿ, ಧನಪಾಲ ಪಾಟೀಲ, ಪ್ರೀತಮ ಬೆಳಗಾವಿ, ಪ್ರಥಮ ತುರಮರಿ, ನವೀನ ತುರಮರಿ, ಚೇತನ ಬೆಳಗಾವಿ, ಅರುಣ ತುರಮರಿ, ಸಂಗಮೇಶ ರೇಶ್ಮಿ, ಚಿನ್ಮಯ ಸುಕುಂದಮಠ, ಬಸವರಾಜ ಚಿನಿವಾಲರ, ಮಂಜು ಪಟ್ಟಿಹಾಳ, ಮಣಿಕಂಠ ಕಗ್ಗೋಡಿ, ದರ್ಶನ ಕಮ್ಮಾರ, ಸೋಮು ಬಡ್ಡಿಮನಿ, ಶಮಿ ಮಕಾನದಾರ, ಸಮೀರ ಬೂದಿಹಾಳ, ವಿನಯ ಬೋಡಕಿ ಇತರರು ಇದ್ದರು.