ಸವದತ್ತಿ ಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತುಬ್ಬುದ್ದೀನ್ ಖಾಜಿ ಮಾತನಾಡಿದರು. ಆರ್.ಬಿ.ಶಂಕರಗೌಡ, ಬಸವರಾಜ ಕಪನ್ನವರ, ನಾಗಪ್ಪ ಪ್ರಭುನವರ, ಎ್.ಎಂ.ನದಾಫ್ ಇತರರಿದ್ದರು. 
ಬೆಳಗಾವಿ

ಸವದತ್ತಿ-ಯಲ್ಲಮ್ಮ ಎಕ್ಸ್‌ಪ್ರೆಸ್ ರೈಲುಮಾರ್ಗ ಘೋಷಿಸಿ

ನಗರದ ಕಲ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ್ಮ, ಗೊಡಚಿ ವೀರಭದ್ರೇಶ್ವರ ಸೇರಿ ಇನ್ನೂ ಅನೇಕ ಕ್ಷೇತ್ರಗಳಿಗೆ, ವ್ಯಾಪಾರೀಕರಣಕ್ಕೆ ಸಾರಿಗೆ ವ್ಯವಸ್ಥೆಗಳಿಗಾಗಿ ಈ ಭಾಗದ ಜನತೆಗೆ ರೈಲು ಸಂಪರ್ಕ ಅತ್ಯಗತ್ಯವಾಗಿದೆ. ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ನಡೆಸಬೇಕು ಎಂದರು.
ಸವದತ್ತಿ ತಾಲೂಕಾಧ್ಯಕ್ಷ ಆರ್.ಬಿ.ಶಂಕರಗೌಡ ಮಾತನಾಡಿ, ಈ ತಿಂಗಳಲ್ಲಿಯೇ ಸವದತ್ತಿ, ರಾಮದುರ್ಗ ಹಾಗೂ ಲೋಕಾಪುರದಲ್ಲಿ ಏಕಕಾಲಕ್ಕೆ ಸಭೆ, ಪ್ರತಿಭಟನೆ ಮತ್ತು ಪತ್ರ ಚಳುವಳಿ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಕಾರ್ಮಿಕ ಮುಖಂಡ ಗೈಬುಸಾಬ್ ಜೈನೇಖಾನ್ ಮಾತನಾಡಿ, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆ ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಯಲ್ಲಮ್ಮ ಎಕ್ಸ್‌ಪ್ರೆಸ್ ಆರಂಭವಾಗುವುದು ಖಚಿತ ಎಂದರು.
ಸಭೆಯಲ್ಲಿ ಪತ್ರ ಚಳವಳಿ ಹಾಗೂ ಪಕ್ಷಾತೀತ ಹೋರಾಟದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ತೀರ್ಮಾನ ಕೈಗೊಳ್ಳಲಾಯಿತು.
ರೈಲು ಹೋರಾಟ ಸಮಿತಿ ಮುಖಂಡರಾದ ರಾಜು ನಿಡೋನಿ, ಬಸವರಾಜ ಕಪನ್ನವರ, ನಾಗಪ್ಪ ಪ್ರಭುನವರ, ಎ್.ಎಂ.ನದಾಫ್, ಸುನೀಲ ಸುಳ್ಳದ, ಕಾರ್ಮಿಕ ಮುಖಂಡ ಎಲ್.ಎಸ್.ನಾಯ್ಕ, ಎಂ.ಎಂ.ನಿಗದಿ, ಚಂದ್ರಕಾಂತ ಮಾಳದಕರ, ಡಾ.ಎಂ.ಕೆ.ಯಾದವಾಡ, ಶಂಕರಪ್ಪ ತೋರಗಲ್ಲ ಇತರರು ಇದ್ದರು.