ಸವದತ್ತಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮದೇವಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. ವಿರೂಪಾಕ್ಷ ಮಾಮನಿ, ಸದಾಶಿವ ಕೌಜಲಗಿ, ಮಲ್ಲಿಕಾರ್ಜುನ ಶಿವಾಚಾರ್ಯರು, ಬಸವರಾಜ ಕಾರದಗಿ ಇತರರಿದ್ದರು. 
ಬೆಳಗಾವಿ

ಮೇನಲ್ಲಿ ಸವದತ್ತಿ ಗ್ರಾಮದೇವಿ ಜಾತ್ರೆ

ಸವದತ್ತಿ:
ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮದೇವಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಿದ್ಯುತ್ ದೀಪ ಅಳವಡಿಕೆ, ರಸ್ತೆ, ಚರಂಡಿ ಸೇರಿ ಜಾತ್ರೆ ಸಿದ್ಧತೆ ಕಾಮಗಾರಿ ಕೈಗೊಳ್ಳಲು 1.5 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿ, ಯುಗಾದಿ ಹಬ್ಬದಂದು ಕಾಯಿ ಕಟ್ಟುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುವುದು. ಪಟ್ಟಣದ ಪ್ರತಿ ವಾರ್ಡ್‌ನಿಂದ 5 ಜನರನ್ನು ಜಾತ್ರಾ ಯಶಸ್ಸು ಸಮಿತಿ ಸದಸ್ಯರನ್ನಾಗಿ ನೇಮಿಸಲಾಗುವುದು. ಎಲ್ಲ ಸಮುದಾಯಗಳು ಗ್ರಾಮದೇವಿ ಜಾತ್ರೆ ಪೂರ್ವಸಿದ್ಧತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸಿಗೆ ಶ್ರಮಿಸಬೇಕು ಎಂದರು.
ಸ್ಥಳೀಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಬಸವರಾಜ ಕಾರದಗಿ, ಡಾ.ಎನ್.ಸಿ.ಬೆಂಡಿಗೇರಿ, ಬಿ.ಎನ್.ಪ್ರಭುನವರ, ಕೆ.ಕೆ.ಪುಣೇದ, ಅಡಿವೆಪ್ಪ ಬೀಳಗಿ, ಮಲ್ಲಿಕಾರ್ಜುನ ಬೇವೂರ, ಸುಭಾಸ ರಜಪೂತ, ಪ್ರವೀಣ ಪಟ್ಟಣಶೆಟ್ಟಿ, ಎಲ್.ಆರ್.ಕುಲಕರ್ಣಿ, ಪಿಐ ಸುರೇಶ ಬೆಂಡೆಗುಂಬಳ, ರತ್ನಾ ಮಾಮನಿ, ಶ್ರೀಶೈಲ ಮುತಗೊಂಡ, ಸಿದ್ದಯ್ಯ