ಸವದತ್ತಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಸಮಾರೋಪ ಸಭೆಯಲ್ಲಿ ಉದ್ಯಮಿ ಅಶ್ವತ್ಥ ವೈದ್ಯ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ, ಶ್ರೀಶೈಲ ಮುತಗೊಂಡ, ಬಿ.ಎನ್.ಪ್ರಭುನವರ, ಮದನಲಾಲ್ ಚೋಪ್ರಾ ಇತರರಿದ್ದರು.
ಸವದತ್ತಿ:
ನಗರದ ಗಡೇಕಾರ ಪ್ಲಾಟಿನ ಕಾಡಸಿದ್ಧೇಶ್ವರ ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಾರೋಪ ಹಾಗೂ ಮಹಾಮಂಗಲೋತ್ಸವ ಸಮಾರಂಭದಲ್ಲಿ ಮಾತನಾಡಿ, ಜಾತ್ರೆ ಭಾವೈಕ್ಯ, ಪರಸ್ಪರ ವಿಶ್ವಾಸ ಹಾಗೂ ಸಾಮಾಜಿಕ ಬಾಂಧವ್ಯ ಗಟ್ಟಿಗೊಳಿಸುವ ಮಹೋತ್ಸವವಾಗಿದೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಜಾತ್ರೆ-ಹಬ್ಬಗಳು ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗಿವೆ. ವಿದೇಶಗಳಲ್ಲಿ ಯುದ್ಧ ಮತ್ತು ಅಶಾಂತಿ ಕಾಣಿಸುತ್ತಿದ್ದರೂ, ಭಾರತದಲ್ಲಿ ಧಾರ್ಮಿಕ ಆಚರಣೆ ಜನರಲ್ಲಿ ನೆಮ್ಮದಿ ಮತ್ತು ಸೌಹಾರ್ದ ಬೆಳೆಸುತ್ತಿವೆ ಎಂದರು.
ಪತ್ರಿವನಮಠದ ಸಿದ್ಧವೀರ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹದಿನಾರು ರೈತ ಮನೆತನದವರು, ಕುಲಕರ್ಣಿ, ಮೇಟಿ, ಬಾಬದಾರರು, ಹಳಬರು, ದಾನಿಗಳು ಹಾಗೂ ಗ್ರಾಮದೇವಿ ಜಾತ್ರಾ ಉತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು.
ಉದ್ಯಮಿ ಅಶ್ವತ್ಥ ವೈದ್ಯ, ಸದಾಶಿವ ಕೌಜಲಗಿ, ಶ್ರೀಶೈಲ ಮುತಗೊಂಡ, ಬಿ.ಎನ್.ಪ್ರಭುನವರ, ಮದನಲಾಲ್ ಚೋಪ್ರಾ, ಹೆಸ್ಕಾಂ ಎಇಇ ಮಹೇಂದ್ರ ವಿಶಾಪುರಕರ, ವಿಜಯ ಹಿರೇಮಠ, ಗಿರೀಶ ಮುನೋಳಿ,