ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿರುವ ಸಾಯಿ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಪಾದನಾ ಶ್ರೀ, ಜಗದೀಶ ಕವಟಗಿಮಠ, ಆದಿನಾಥ ಶೆಟ್ಟಿ, ಮಡಿವಾಳಪ್ಪ ಬಸರಗಿ, ಸಿದ್ದಪ್ಪ ಡಂಗೆರ ಇತರರಿದ್ದರು. 
ಬೆಳಗಾವಿ

ಸಾಯಿಮಂದಿರ ವಾರ್ಷಿಕೋತ್ಸವ 24ರಿಂದ

ಪ್ರಶಾಂತ ಹೂಗಾರ
ಚಿಕ್ಕೋಡಿ: ಪಟ್ಟಣದ ಶಿರಡಿ ಸಾಯಿ ಬಾಬಾ ಮಂದಿರದ 19ನೇ ವಾರ್ಷಿಕೋತ್ಸವದ ಅಂಗವಾಗಿ ಜ.24ರಿಂದ 30ರವೆರೆಗೆ ಸಿಎಲ್‌ಇ ಸಂಸ್ಥೆ ಸಹಯೋಗದೊಂದಿಗೆ ಪಟ್ಟಣದ ಚರಮೂರ್ತಿ ಸಂಪಾದನಾ ಚರಮೂರ್ತಿಮಠದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಾಯಿ ಪರಿವಾರದ ಅಧ್ಯಕ್ಷ ಜಗದೀಶ ಕವಟಗಿಮಠ ತಿಳಿಸಿದರು.
ಪಟ್ಟಣದಲ್ಲಿ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಜ.24ರಂದು ಬೃಹತ್ ಉದ್ಯೋಗ ಮೇಳ ಜರುಗುವುದು. ಜ.25ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಜ.24ರಿಂದ 27ರವರೆಗೆ ಸ್ವಚ್ಛ ಚಿಕ್ಕೋಡಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜ.26ರಂದು ಸಿಎಲ್‌ಇ ಸಂಸ್ಥೆ ಆವರಣದಲ್ಲಿ ಕಬಡ್ಡಿ ಪಂದ್ಯಾವಳಿ, ಜ.28ರಂದು ಬೆಳಗ್ಗೆ 7 ಗಂಟೆಗೆ ಸಂಪಾದನ ಚರಮೂರ್ತಿ ಮಠದ ಸಂಪಾದನಾ ಶ್ರೀ ಧ್ವಜಾರೋಹಣ ನೆರವೇರಿಸುವರು. 8.30ಕ್ಕೆ ಶತ ಚಂಡಿಯಾಗ, ನೃತ್ಯ ಕಲಾ ಪ್ರದರ್ಶನ, ಮಹಿಳೆಯರಿಂದ ಸಹಸ್ರನಾಮ ಪಠಣ, ಮಹಿಳೆಯರಿಗಾಗಿ ವಿಚಾರ ಸಂಕಿರಣ, ಜ.29ರಂದು ಮಂಡಲ ಪೂಜೆ, ತಾಯಿಯಂದಿರ ಪಾದಪೂಜೆ, ಆಹಾರಮೇಳ, ಜ.30ರಂದು ಉಚಿತ ಸಾಮೂಹಿಕ ವಿವಾಹ, ಸಂಗೀತ ಸಂಜೆ ಕಾರ್ಯಕ್ರಮ ಜರುಗುವುದು ಎಂದರು.
ಸಾಯಿ ಪರಿವಾರದ ಸದಸ್ಯರಾದ ಆದಿನಾಥ ಶೆಟ್ಟಿ, ಮಡಿವಾಳಪ್ಪ ಬಸರಗಿ, ರಾಜು ಹಿರೇಮಠ, ರಾಜು ವಂಟಮುತ್ತೆ, ಅಶೋಕ ಪಾಠಕ, ಪುರಸಭೆ ಸದಸ್ಯರಾದ ಸಂಜಯ ಕವಟಗಿಮಠ, ಸಿದ್ದಪ್ಪ ಡಂಗೆರ, ಸಿಎಲ್‌ಇ ಸಂಸ್ಥೆಯ ಆಡಳಿತಾಧಿಕಾರಿ ಸಾಗರ ಬಿಸ್ಕೋಪ, ಸಂಪಾದನಾ ಶ್ರೀ ಇತರರಿದ್ದರು.