ಪಟ್ಟಿಹಾಳ ಕೆ.ಬಿ.ಗ್ರಾಮದದಲ್ಲಿ ಈಚೆಗೆ ಅಗ್ನಿಶಾಮಕ ಉಪಕರಣ ಬಳಕೆ ಕುರಿತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಜರುಗಿತು. ಎ.ಆರ್.ಕಡಬಿ, ಎಂ.ಬಿ.ಕರೀಕಟ್ಟಿ, ಬಿ.ಎಸ್.ಜಮಖಂಡಿ, ಎಲ್.ಎ.ಕಡಬಿ, ಶಿವಾನಂದ ವಾಲಿಶೆಟ್ಟಿ ಇದ್ದರು. 
ಬೆಳಗಾವಿ

ಮಕ್ಕಳಲ್ಲಿ ಸುರಕ್ಷತೆ ಅರಿವು ಅಗತ್ಯ

ಬೈಲಹೊಂಗಲ:

ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಧೈರ್ಯ ಮನೋಭಾವ ಬೆಳೆಸುತ್ತವೆ. ಶಾಲಾ ಹಂತದಲ್ಲಿಯೇ ಸುರಕ್ಷತೆಯ ಅರಿವು ಮೂಡಿಸುವುದು ಅಗತ್ಯ ಎಂದು ಅನಿಕೇತನ ಶಾಲೆ ಸಂಸ್ಥಾಪಕ ಅಧ್ಯಕ್ಷ ಎ.ಆರ್.ಕಡಬಿ ಹೇಳಿದರು.

ಪಟ್ಟಿಹಾಳ ಕೆ.ಬಿ.ಗ್ರಾಮದ ಅನಿಕೇತನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಡಬಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಈಚೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಗ್ನಿಶಾಮಕ ಸಿಬ್ಬಂದಿ ಅಗ್ನಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಹಾಗೂ ಅಗ್ನಿಶಾಮಕ ಉಪಕರಣಗಳ ಬಳಕೆ ಕುರಿತು ಮಾಹಿತಿ ನೀಡಿದರು.
ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಶಿವಾನಂದ ವಾಲಿಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಉಮೇಶ ಅಂಗಡಿ, ಸಂತೋಷ ಮುತಗಿ, ರಾಜನಗೌಡ ಪಾಟೀಲ, ದೇವರಾಜ ಕಟ್ಟಿ ಹಾಗೂ ಬಿ.ಎಂ.ಗುಡಗುಡಿ ಅವರು ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ

ಎಲ್.ಎ.ಕಡಬಿ, ಎಂ.ಬಿ.ಕರೀಕಟ್ಟಿ,

ಬಿ.ಎಸ್.ಜಮಖಂಡಿ ಇತರರಿದ್ದರು.