ಎಸ್ಸಿ ವೈಜ್ಞಾನಿಕ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಕರಪತ್ರವನ್ನು ಹುಕ್ಕೇರಿಯಲ್ಲಿ ಗಣ್ಯರು ಬಿಡುಗಡೆಗೊಳಿಸಿದರು. ಮಲ್ಲಿಕಾರ್ಜುನ ರಾಶಿಂಗೆ, ಕಿರಣ ಬಾಗೇವಾಡಿ, ಶ್ರೀನಿವಾಸ ವ್ಯಾಪಾರಿ, ಕವಿತಾ ಬೇವಿನಕಟ್ಟಿ ಇತರರಿದ್ದರು
ಹುಕ್ಕೇರಿ: ವೈಜ್ಞಾನಿಕ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.25ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಎಸ್ಸಿ ಬಲಗೈ ಸಮುದಾಯದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಒಂದು ಜಾತಿಯನ್ನು ಓಲೈಸಲು 100 ಜಾತಿಗಳನ್ನು ತುಳಿಯಲು ಹೊರಟಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರುವಲ್ಲಿ ಬಲಗೈ ಜಾತಿಗಳ ಪರಿಶ್ರಮ ಅಪಾರವಾಗಿದೆ. ಆದರೆ, ಅವೈಜ್ಞಾನಿಕವಾದ ನಾಗಮೋಹನದಾಸ ವರದಿ ಆಧರಿಸಿ ಮಾ.27ರಂದು ಒಳ ಮೀಸಲಾತಿ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಕಿರಣ ಬಾಗೇವಾಡಿ, ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ವ್ಯಾಪಾರಿ, ಉಪಾಧ್ಯಕ್ಷ ಬಸವರಾಜ ದೇವುಗೋಳ, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಬೇವಿನಕಟ್ಟಿ, ಮಂಜು ಪಡದಾರ, ಬಸು ಹವಾಲ್ದಾರ್, ಕಿರಣ ಕೋಳಿ, ಮಾರುತಿ ಚಿಕ್ಕೋಡಿ, ಚಿದು ಹಿರೇಕೆಂಚಣ್ಣವರ, ಸತೀಶ ದಿನ್ನಿಮನಿ, ಅಮೂಲ್ ಕಾಂಬಳೆ, ವಿಶ್ವನಾಥ ಕಟ್ಟಿ, ಮಲ್ಲೇಶ ಕುರಣಿ ಇತರರಿದ್ದರು.