ಕಡಬಿಯಲ್ಲಿ ಹಮ್ಮಿಕೊಂಡಿದ್ದ ಹ್ಾ ಪಿಚ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಶಾಸಕ ವಿಶ್ವಾಸ ವೈದ್ಯ ಬಹುಮಾನ ವಿತರಿಸಿದರು. ಪ್ರಕಾಶ ಸುಣಧೋಳಿ, ನೀಲಕಂಠ ಸಿದ್ದಬಸಣ್ಣವರ, ಶಂಕರ ಇಟ್ನಾಳ ಇತರರಿದ್ದರು. 
ಬೆಳಗಾವಿ

ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ

ಪ್ರಶಾಂತ ಹೂಗಾರ

ಕಡಬಿ: ಯುವಕರು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವ ಜತೆಗೆ ಶಿಸ್ತು, ನಾಯಕತ್ವ ಗುಣ ಬೆಳೆಯುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ವಿಶ್ವಾಸ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹ್ಾ ಪಿಚ್ ಕ್ರಿಕೆಟ್ ೈನಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಯುವಕರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಕ್ರೀಡಾ ಪ್ರತಿಭೆಗಳಿದ್ದು, ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯ ದೊರೆತರೆ ಅವರು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ ಸುಣಧೋಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸಣ್ಣವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಕೀರಪ್ಪ ಹದ್ದನ್ನವರ, ಛಾಯಪ್ಪ ಹುಂಡೇಕಾರ, ಗಂಗಪ್ಪ ಮೀಶಿ, ಬಸವರಾಜ ಮಾಳಕ್ಕನವರ, ಕಿಟ್ಟು ಹುಂಡೇಕಾರ, ಶಿಂಗಯ್ಯ ಮಠಪತಿ, ಸಿದ್ದಪ್ಪ ಮಾಳಕ್ಕನವರ, ಮಂಜುನಾಥ ಹುಂಡೇಕಾರ, ಲವಿತ ಮಾಳ್ಳೆನವರ, ತಿಪ್ಪಣ್ಣ ಉದಗಟ್ಟಿ, ಮಡಿವಾಳ ಕುಂಟೀರಪ್ಪಗೋಳ, ಭೀಮಶಿ ದಳವಾಯಿ, ರೆಹಮಾನ್ ಸನದಿ, ಸೈದು ಸನದಿ, ಅರ್ಜುನ ಮಾಳಕ್ಕನವರ, ಸಿದ್ದಪ್ಪ ಮುಕ್ಕಣ್ಣವರ, ಬಸವರಾಜ ವಾರಲಗಟ್ಟಿ ಇತರರಿದ್ದರು.