ಇಟಗಿ ಸಮೀಪದ ಮೂಕಬಸವ ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗುಲಾಬಸಾಬ್ ಬಾಳೇಕುಂದ್ರಿ, ಅಭಿಷೇಕ ಅರಳಿಮರದ, ಬಸವರಾಜ ರಾಮಜಿ ಇತರರಿದ್ದರು. 
ಬೆಳಗಾವಿ

ಭಾಷೆ ಬೆಳವಣಿಗೆಯಲ್ಲಿ ಗ್ರಾಮೀಣ ಮಕ್ಕಳ ಕೊಡುಗೆ ಅಪಾರ

ಪ್ರಶಾಂತ ಹೂಗಾರ
ಇಟಗಿ: ಕನ್ನಡ ಭಾಷೆ ಬೆಳವಣಿಗೆಯಲ್ಲಿ ಗ್ರಾಮೀಣ ಮಕ್ಕಳ ಕೊಡುಗೆ ಅಪಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಗುಲಾಬಸಾಬ್ ಬಾಳೇಕುಂದ್ರಿ ಹೇಳಿದರು.
ಸಮೀಪದ ಮೂಕಬಸವನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 44ನೇ ಅನುಭಾವ ಬೆಳದಿಂಗಳ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮೂಲ ಸೌಲಭ್ಯ ಕೊರತೆ ಮಧ್ಯೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪಾಲಕರು ನೀಡುತ್ತಿರುವ ಆಸಕ್ತಿ ಮಾದರಿಯಾಗಿದೆ ಎಂದರು.
ಮುಖ್ಯಶಿಕ್ಷಕ ಷಣ್ಮುಖ ಗಣಾಚಾರಿ ಹಾಗೂ ವೈ.ಕೆ.ನಾಗಣ್ಣವರ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ತೇಜಶ್ರೀ ಕೇದಾರ್ಜಿ, ಗೌರಮ್ಮ ಮಾತಾರಿ, ಲಕ್ಷ್ಮೀ ಮಾತಾರಿ, ಅಭಿಷೇಕ ಅರಳಿಮರದ, ಬಸವರಾಜ ರಾಮಜಿ ಅವರನ್ನು ಸನ್ಮಾನಿಸಲಾಯಿತು. ಅಡವಿಸಿದ್ಧೇಶ್ವರ ಸ್ವಾಮೀಜಿ, ರಾಜೇಂದ್ರ ಇನಾಮದಾರ, ಕಾಶೀಮಸಾಬ್ ನೇಸರಗಿ, ಮಯೂರ ಗಿರಿಯಾಲ, ನವೀನ ರಾಮಜಿ, ರುದ್ರಯ್ಯ ಕರಡಿ, ಶ್ರೀನಿವಾಸ ಕೇದಾರ್ಜಿ, ಮಂಜು ಅಂಕಲಗಿ ಇತರರಿದ್ದರು.