ಬೆಳಗಾವಿ ಗುರುಪ್ರಸಾದ ಕಾಲನಿಯ ದತ್ತ ಮಂದಿರದ ಅತಿರುದ್ರ ಪಠಣ ಯಾಗದ ದೃಶ್ಯ.
ಬೆಳಗಾವಿ: ನಗರದ ಗುರು ಪ್ರಸಾದ ಕಾಲನಿಯ ದತ್ತ ಮಂದಿರದಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿ ಆರು ದಿನಗಳ ಅತಿರುದ್ರ ಅನುಷ್ಠಾನ ಏರ್ಪಡಿಸಲಾಗಿತ್ತು.
ಎರಡು ದಶಕಗಳ ನಂತರ ನಡೆದ ಈ ಕಾರ್ಯಕ್ರಮದಲ್ಲಿ ಎಪ್ಪತ್ತಕ್ಕೂ ಹೆಚ್ಚು ರುದ್ರ ಪಾಠಕರು ನಿತ್ಯ ಐದು ತಾಸು ರುದ್ರ ಪಠಣ ಮಾಡಿದರು. ಕೊನೆಯ ದಿವಸ ಹೋಮ ಹವನ ರುದ್ರ ಸ್ವಾಹಾಕಾರ ಕಾರ್ಯಕ್ರಮಗಳು ನೆರವೇರಿದವು.
ಸಾಗರ ಕೆರೂರ, ದರ್ಶನ ಕುಲಕರ್ಣಿ, ವಿನಾಯಕ ಒಡೆಯರ, ಚಂದ್ರಶೇಖರ ಜೋಶಿ, ಬೋಂದ್ರೆ ಗುರು ಮಾರ್ಗದರ್ಶನದಲ್ಲಿ ನಡೆದ ಅನುಷ್ಠಾನದಲ್ಲಿ ಸಂತೋಷಾಚಾರ್ಯ ಜೋಶಿ , ವಿನಾಯಕ ಮುತಾಲಿಕ ದೇಸಾಯಿ , ಯೋಗೇಶ , ಗಣೇಶ ಫಡಕೆ , ಸಂಜೀವ ಕುಲಕರ್ಣಿ , ಚಿದಂಬರ ಮುನವಳ್ಳಿ ,ರಮೇಶ ದೀಕ್ಷಿತ, ಶಾರ್ದೂಲ ಗುರೂಜಿ , ಭಾವು ಜೋಶಿ, ಅರ್ಚಕರಾದ ಮಹೇಶ ಹಿರೇಹಳ್ಳಿ ಇತರರು ಭಾಗವಹಿಸಿದ್ದರು. ಕೊನೆಯ ದಿನ ಸೋಮವಾರ ರವಿ ಕಾಟವಾ ನೇತೃತ್ವದಲ್ಲಿ ಪೂರ್ಣಾಹುತಿ ಅರ್ಪಿಸಲಾಯಿತು.