ಮಂಗೂರಿನಲ್ಲಿ ರಸ್ತೆ ಕಾಮಗಾರಿಗೆ ಹಾಲಶುಗರ್ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಪವನ ಪಾಟೀಲ, ಶರದ ಜಂಗಟೆ, ದೇವಪ್ಪ ದೇವಕಾತ, ಸಂದೀಪ ಪಾಟೀಲ, ದೇವದತ್ತ ರಾಜಹಂಸ ಇತರರಿದ್ದರು.
ಬೋರಗಾಂವ: ಸಮೀಪದ ಮಂಗೂರ ಗ್ರಾಮದ ಬಸ್ ನಿಲ್ದಾಣದಿಂದ ಚೌಕಿ ಮಾಳ ಗಣೇಶ ದೇವಸ್ಥಾನದವರೆಗಿನ ರಸ್ತೆ ಡಾಂಬರೀಕರಣಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಅವರು ಪಿಆರ್‌ಇಡಿ ಯೋಜನೆಯಿಂದ ೯೦ ಲಕ್ಷ ರೂ. ನಿಧಿ ಮಂಜೂರು ಮಾಡಿದ್ದಾರೆ ಎಂದು ಹಾಲಶುಗರ್ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ ಹೇಳಿದರು.
ಸಮೀಪದ ಮಾಂಗೂರು ಗ್ರಾಮದಲ್ಲಿ ರಸ್ತೆ ಸುಧಾರಣೆಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಬಹುದಿನಗಳ ಬೇಡಿಕೆಯಾಗಿದ್ದ ಚೌಕಿ ಮಾಲ್ ರಸ್ತೆ ಡಾಂಬರೀಕರಣ ಸಮಸ್ಯೆ ಗಮನದಲ್ಲಿಟ್ಟುಕೊಂಡು, ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ೨ ಕಿಮೀ ರಸ್ತೆ ಕಾಮಗಾರಿಗೆ ೯೦ ಲಕ್ಷ ರೂ. ಮಂಜೂರು ಮಾಡಿದ್ದಾರೆ. ಇದರಿಂದ ನಾಗರಿಕರಿಗೆ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದರು.
ಪವನ ಪಾಟೀಲ, ಶರದ ಜಂಗಟೆ, ದೇವಪ್ಪ ದೇವಕಾತ, ಗ್ರಾಪಂ ಸದಸ್ಯ ಸಂದೀಪ ಪಾಟೀಲ, ದೇವದತ್ತ ರಾಜಹಂಸ, ರಾಜು ಘೋಡ್ಕೆ, ಆನಂದ ಅವಟೆ, ಮಲ್ಲಪ್ಪ ಚೌಗುಲೆ, ಆನಂದ ಐನಾಪುರೆ, ಮಲ್ಲಪ್ಪ ಚೌಗುಲೆ, ಪ್ರದೀಪ ಚೌಗುಲೆ, ವಿಲಾಸ ಜಳನೆ, ಸಂಜಯ ಠಕಾನೆ, ಬಂಟಿ ಮುಲ್ಲಾ, ರಾಜಶ್ರೀ ಪಾಟೀಲ, ವಿನೋದ ಬೋದಲೆ ಇತರರಿದ್ದರು.