ಬಡಚಿ ಎಸ್ಟಿ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ ನೀಡಿದರು. ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ರಮೇಶ ಸಿಂದಗಿ, ಸುನೀತಾ ಐಹೊಳೆ, ರೇಖಾ ಪಾಟೀಲ ಇತರರಿದ್ದರು. 
ಬೆಳಗಾವಿ

ಕ್ಷೇತ್ರಾಭಿವೃದ್ಧಿಗೆ 70 ಲಕ್ಷ ರೂ. ಮಂಜೂರು

ಅಥಣಿ ಗ್ರಾಮೀಣ: ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಅಥಣಿ ತಾಲೂಕಿನ ಹುಲಗಬಾಳ, ಬಡಚಿ ಹಾಗೂ ಮುರಗುಂಡಿ ಗ್ರಾಮಗಳ ಎಸ್ಸಿ ಹಾಗೂ ಎಸ್ಟಿ ಬಡಾವಣೆಯಲ್ಲಿ 75 ಲಕ್ಷ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಸಂಸದರ ನಿಧಿಯಿಂದ 70 ಲಕ್ಷ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ರಮೇಶ ಸಿಂದಗಿ, ಈಶ್ವರ ಸನದಿ, ಪರಶುರಾಮ ದನದಮನಿ, ವಿಜಯಕುಮಾರ ಬಡಚಿ, ರಮೇಶ ಪಾಟೀಲ, ರಾಜು ಹಡ್ಡೇಕರ, ರವಿ ಪಾಟೀಲ, ಈರಪ್ಪ ದನದಮನಿ, ಅಪ್ಪಣ್ಣ ಕಮತಗಿ, ವಿಜಯ ಕಾಂಬಳೆ, ಸುನೀತಾ ಐಹೊಳೆ, ರೇಖಾ ಪಾಟೀಲ, ಇಸಾಕ್ ನದಾಫ್ ಇತರರಿದ್ದರು.