ನಿಪ್ಪಾಣಿ ತಾಲೂಕಿನ ಕುನ್ನೂರ-ಶಿವಪುರವಾಡಿ ರಸ್ತೆ ಡಾಂಬರೀಕರಣ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಬಾಳಾಸಾಹೇಬ ಕದಂ, ಮಲಗೊಂಡಾ ಪಾಟೀಲ, ಶ್ರೀಕಾಂತ ಕಣಗಲೆ, ಸಮಿತ ಸಾಸನೆ, ಸರೋಜಾ ಜಮದಾಡೆ ಇತರರಿದ್ದರು.
ನಿಪ್ಪಾಣಿ: ಕುನ್ನೂರ-ಮಾಂಗೂರ ಮುಖ್ಯ ರಸ್ತೆಯಿಂದ ಶಿವಾಪುರವಾಡಿವರೆಗಿನ ರಸ್ತೆಯು 50 ಲಕ್ಷ ರೂ. ಅನುದಾನದಲ್ಲಿ ಡಾಂಬರೀಕರಣಗೊಳ್ಳಲಿದೆ ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.
ಇಲ್ಲಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿ, ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನದಿಂದ, ಜಿಲ್ಲಾ ಪಂಚಾಯಿತಿ ಮತ್ತು ಪಿಆರ್‌ಇಡಿ ಇಲಾಖೆ ಮೂಲಕ ಕಾಮಗಾರಿಗೆ ಅನುದಾನ ಅನುಮೋದನೆಗೊಂಡಿದೆ ಎಂದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಬಾಳಾಸಾಹೇಬ ಕದಂ, ಹಾಲಶುಗರ್ಸ್ ಕಾರ್ಖಾನೆ ಮಾಜಿ ನಿರ್ದೇಶಕ ಶ್ರೀಕಾಂತ ಕಣಗಲೆ, ಉತ್ತಮ ಕುಲಕರ್ಣಿ, ದತ್ತಾತ್ರೇಯ ಶಿಂಧೆ, ಉದಯ ಕಣಗಲೆ, ಮಹಾದೇವ ಬೋಟೆ, ಭಾಗೋಜಿ ಧನಗರ್, ಸರೋಜಾ ಜಮದಾಡೆ, ಶಾಂತಾ ಕಿಲ್ಲೇದಾರ, ಸಮಿತ್ ಸಾಸನೆ, ರಮೇಶ ಪಾಟೀಲ, ಸುಹಾಸ ಗೂಗೆ, ಅನಿಲ ಹೆಗಡೆ, ಸಂಜು ಖೋತ, ಅಣ್ಣಪ್ಪ ಬನ್ನೆ, ಕಲ್ಲಪ್ಪ ಗೋಡ್ಸೆ, ಕಿರಣ ಮಾನೆ, ದಾಜಿರಾವ್ ಕರಡೆ, ಅಜಿತ ಹುಜರೆ, ಅನಿಲ ಸಾತಪುತೆ, ವಿಜಯ ನಾಯಕ, ಪೋಪಟ್ ಕಿಲ್ಲೇದಾರ, ಸಾತು ಖೋತ ಇತರರಿದ್ದರು.