ಕಸನಾಳ ಗ್ರಾಮದ ಕೋಕರೆ ತೋಟದ ಪಾನಂದ ರಸ್ತೆ ಕಾಮಗಾರಿಗೆ ಬಾಳಾಸಾಹೇಬ ಕದಂ ಚಾಲನೆ ನೀಡಿದರು. ಡಾ.ಅಜಿತ ಪಾಟೀಲ, ದೇವಪ್ಪ ದೇವಕಾತೆ, ರಾಜು ಭದರಗಡೆ, ವಿಶ್ವಾಸ ನಾಯಿಕ ಇತರರಿದ್ದರು. 
ಬೆಳಗಾವಿ

ಪಾನಂದ ರಸ್ತೆ ಕಾಮಗಾರಿಗೆ ೩೫ ಲಕ್ಷ ರೂ.

ವಿದ್ಯಾ ಶೆಟ್ಟನಗೌಡ್ರ
ಬೋರಗಾಂವ: ನಿಪ್ಪಾಣಿ ತಾಲೂಕಿನ ರಾಜಕೀಯ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮಾಡುತ್ತಿರುವ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ ಎಂದು ನಿಪ್ಪಾಣಿ ತಾಲೂಕು ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಾಳಾಸಾಹೇಬ ಕದಂ ಹೇಳಿದರು.
ಸಮೀಪದ ಕಸನಾಳ ಗ್ರಾಮದಲ್ಲಿ ಮಂಗಳವಾರ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಇವರ ವಿಶೇಷ ಪ್ರಯತ್ನದಿಂದ ೩೫ ಲಕ್ಷ ರೂ. ಅನುದಾನದಲ್ಲಿ ಮಂಜೂರಾದ ಕೋಕರೆ ತೋಟದ ಪಾನಂದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಪಂ ಮಾಜಿ ಸದಸ್ಯ ಡಾ.ಅಜಿತ ಪಾಟೀಲ ಮಾತನಾಡಿ, ತೋಟದ ರಸ್ತೆಯಾಗಬೇಕೆಂದು ಕಳೆದ ೨೫ ವರ್ಷಗಳ ಬೇಡಿಕೆ ಇತ್ತು. ಸಮಸ್ಯೆಗೆ ಸ್ಪಂದಿಸಿ ಶಾಸಕಿ ಜೊಲ್ಲೆ ೩೫ ಲಕ್ಷ ಅನುದಾನ ನೀಡಿದ್ದು, ಇದರಿಂದ ಅನುಕೂಲವಾಗಲಿದೆ ಎಂದರು.
ಹಾಲಶುರ‍್ಸ ನಿರ್ದೇಶಕ ಶರದ ಜಂಗಟೆ, ದೇವಪ್ಪ ದೇವಕಾತೆ, ರಾಜು ಭದರಗಡೆ, ವಿಶ್ವಾಸ ನಾಯಿಕ, ಉತ್ತಮ ಶಿಂಧೆ, ಶಿವಾಜಿ ಶಿಂಧೆ, ದೀಪಕ ಕೋಕರೆ, ಶುಭಂ ಪಾಟೀಲ, ನಿತಿನ ಕಾಂಬಳೆ, ಅಜಿತ ಖೋತ, ವಿಜಯ ಕೋಕರೆ, ಭಾನುದಾಸ ಮಗದುಮ್ಮ, ಶಿವರಾಮ ಕೋಕರೆ, ಸಂಜಯ ಗುಳಗುಳೆ ಇತರರಿದ್ದರು.