ಹೊನ್ನಿಹಳ್ಳಿ-ಕಣಗಲಾ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿಪೂಜೆ ನೆರವೇರಿಸಿದರು. ಅಶೋಕ ಹಿರೇಕೋಡಿ, ಪ್ರಶಾಂತ ಪಾಟೀಲ, ರೋಹನ ನೇಸರಿ, ಶಿವಾನಂದ ಮುಡಸಿ ಇತರರಿದ್ದರು. 
ಬೆಳಗಾವಿ

ಸುಗಮ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ನಿಖಿಲ ಕತ್ತಿ ಹೇಳಿಕೆ
  • ರೋಡ್ ಸುಧಾರಣೆಗೆ ಭೂಮಿಪೂಜೆ
ಹುಕ್ಕೇರಿ: ಗ್ರಾಮೀಣ ಜನರ ಸುಗಮ ಸಂಚಾರ ಮತ್ತು ಸರಕು ಸಾಗಣೆ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಮದಮಕ್ಕನಾಳ, ಹೊನ್ನಿಹಳ್ಳಿ, ಕೋಣಕೇರಿ, ಹಡಲಗಾ ಗ್ರಾಮಗಳ ರಸ್ತೆ ಹಾಗೂ ಸಂಕೇಶ್ವರ ಪಟ್ಟಣದ ಲಿಂಗಾಯತ ಸಮುದಾಯದ ಸ್ಮಶಾನ ರಸ್ತೆ ಸುಧಾರಣೆ ಕಾಮಗಾರಿಗೆ ೨.೯೫ ಕೋಟಿ ರೂ. ವೆಚ್ಚದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಬಳಸಿಕೊಂಡು ನೀರಾವರಿ, ಕೃಷಿ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ಒದಗಿಸಲು ಹಲವು ಯೋಜನೆ ಜಾರಿಗೊಳಿಸಲಾಗುತ್ತಿದೆ. ಪಟ್ಟಣ ಮತ್ತು ಗ್ರಾಮಗಳ ನಡುವಿನ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳ ಸುಧಾರಣೆಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.
ಜಿಪಂ ಇಂಜಿನಿಯರಿಂಗ್ ಉಪವಿಭಾಗದ ಎಇಇ ಸುಭಾಷ ಭಜಂತ್ರಿ, ಸಹಾಯಕ ಅಭಿಯಂತ ಶಶಿಧರ ಭೂಸಗೋಳ, ಸುನೀಲ ಪರ್ವತರಾವ, ಶಿವಾನಂದ ಮುಡಸಿ, ಪ್ರಶಾಂತ ಪಾಟೀಲ, ಅಶೋಕ ಹಿರೇಕೋಡಿ, ರೋಹನ ನೇಸರಿ, ಅಪ್ಪಾಸಾಹೇಬ ಶಿರಕೋಳಿ, ಮಹಾದೇವ ಜಕಾತೆ, ರವೀಂದ್ರ ಮಾಯನ್ನವರ, ಕುಮಾರ ತೋಂಡಲೆ, ನೇತಾಜಿ ಪಾಟೀಲ, ಶರದ ಕುರಾಡೆ, ಸುಧಾಕರ ದೇಸಾಯಿ, ನಾರಾಯಣ ರಜಪೂತ, ಮಲ್ಲಪ್ಪ ಬಿಸಿರೊಟ್ಟಿ ಇತರರಿದ್ದರು.