ಐನಾಪುರ-ಕುಡಚಿ ಸಂಪರ್ಕ ರಸ್ತೆ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ ಭೂಮಿಪೂಜೆ ನೆರವೇರಿಸಿದರು. ಸಂಜಯ ಬಿರಡಿ, ವೀರಣ್ಣ ವಾಲಿ ಇತರರಿದ್ದರು.
ಐನಾಪುರ:
ಪಟ್ಟಣದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಅನಗಲ್ಲ ಹಾಗೂ ಬಾರಿಗಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಎಲ್ಲ ರಸ್ತೆ ಕಾಮಗಾರಿಗಳು ಚಾಲ್ತಿಯಲ್ಲಿವೆ. ಇನ್ನೂ ಹೆಚ್ಚು ಅನುದಾನ ನೀಡುವುದಾಗಿ ಕ್ಷೇತ್ರದ ಶಾಸಕರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಪಪಂ ಸದಸ್ಯ ಪ್ರವೀಣ ಗಾಣಿಗೇರ ಮಾತನಾಡಿ, ಶಾಸಕ ಕಾಗೆ ಕಳೆದ 20 ವರ್ಷಗಳಿಂದ ಕಾಗವಾಡ ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ತಂದು ಜನರ ಮೂಲ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಈ ಭಾಗದ ಜನರಿಗೆ ನೆಮ್ಮದಿ ತಂದಿದೆ ಎಂದರು.
ಜಿಪಂ ಅಭಿಯಂತ ವೀರಣ್ಣ ವಾಲಿ, ಮಡಿವಾಳ ಪಾಟೀಲ, ಸುಭಾಷ ಪಾಟೀಲ, ಚಮನರಾವ ಪಾಟೀಲ, ಸಂಜಯ ಬಿರಡಿ, ಸುರೇಶ ಅಡಿ, ಅರವಿಂದ ಕಾರಚಿ, ಕುಮಾರ ಪಾಟೀಲ, ಕುಮಾರ ಜಯಕರ, ಜಿ.ಎಚ್.ಕಟ್ಟಿ, ನಾರಾಯಣ ಕಟ್ಟಿ, ಪ್ರವೀಣ ಕುಲಕರ್ಣಿ, ಸುನೀಲ ಅವಟಿ, ಶಿವಾನಂದ ಬೆಳಕೂಡ, ವಿಜಯ ಹರಳೆ, ಮಹಾಲಿಂಗ ಕಮತೆ ಇತರರಿದ್ದರು.