ಜಾಗನೂರ ಗ್ರಾಮದ ಖಿಂಡಿ ತೋಟದ ವಿಜಯನಗರ-ಗುರುಕುಲ ರಸ್ತೆ ಸುಧಾರಣಾ ಕಾಮಗಾರಿಗೆ ಡಿ.ಎಂ.ಐಹೊಳೆ ಭೂಮಿಪೂಜೆ ನೆರವೇರಿಸಿದರು. ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಮಲ್ಲೇಶ ಹನಮಂತಗೋಳ ಇತರರಿದ್ದರು. 
ಬೆಳಗಾವಿ

ರಸ್ತೆ ನಿರ್ಮಾಣ ಪ್ರಗತಿಗೆ ಮೂಲಾಧಾರ

ರಾಘವೇಂದ್ರಗೌಡ ಭೀ ಪಾಟೀಲ್
ಕಬ್ಬೂರು:
ಜಾಗನೂರ ಗ್ರಾಮದ ಖಿಂಡಿ ತೋಟದ ವಿಜಯನಗರ-ಗುರುಕುಲ ರಸ್ತೆ ಅಭಿವೃದ್ಧಿಗೆ ಪಂಚಾಯತರಾಜ್ ಇಲಾಖೆ ಅನುದಾನದಡಿ 40 ಲಕ್ಷ ರೂ. ಮೊತ್ತದ ರಸ್ತೆ ಸುಧಾರಣಾ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ರಸ್ತೆ ಸುಧಾರಣೆಯಿಂದ ರೈತರು ಕಾರ್ಖಾನೆಗಳಿಗೆ ಕಬ್ಬು, ಪೇಟೆಗೆ ದವಸ-ಧಾನ್ಯ, ತರಕಾರಿ ಸಾಗಿಸಲು ಅನುಕೂಲವಾಗುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಹಿರಾ ಶುಗರ್ಸ್‌ ನಿರ್ದೆಶಕ ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಮಲ್ಲೇಶ ಹನಮಂತಗೋಳ, ಹನುಮಂತ ಕರಿಕಟ್ಟಿ, ಮುತ್ತೆಪ್ಪ ಹನಮನ್ನವರ, ಮಾರುತಿ ಹಮ್ಮಾರ, ಮಹಾಂತೇಶ ಶಿರಗೂರ, ಸಿದ್ದು ಖಿಂಡಿ, ಗೋಪಾಲ ನಾವಿ, ಶಿವಾನಂದ ಪಾಟೀಲ, ಉದ್ದಪ್ಪ ಖಿಂಡಿ, ಎಸ್.ಎಸ್.ಹೊಸಮನಿ, ರಾಮನಗೌಡ ಪಾಟೀಲ, ನಾಗಪ್ಪ ತಿಗಡಿ, ಹನುಮಂತ ಖಿಂಡಿ, ಲಕ್ಷ್ಮಣ ತಿಗಡಿ, ರಾಮಪ್ಪ ತಿಗಡಿ, ಸಿದ್ರಾಮ ಹನಮನ್ನವರ, ಹನುಮಂತ ಖಾನಪ್ಪನವರ ಇತರರಿದ್ದರು.