accident 
ಬೆಳಗಾವಿ

ಬೈಕಿನಿಂದ ಬಿದ್ದು ಸವಾರ ಬಲಿ

ಹುಕ್ಕೇರಿ: ಬೆಳವಿ ಗ್ರಾಮದಲ್ಲಿ ಶನಿವಾರ ನಿಯಂತ್ರಣ ತಪ್ಪಿದ ಬೈಕ್ ಮೇಲಿನಿಂದ ಬಿದ್ದ ಬೆಳವಿ ಗ್ರಾಮದ ಅರ್ಜುನ ಶಂಕರ ಹಡಗಿನಾಳ (45) ಮೃತಪಟ್ಟಿದ್ದಾರೆ. ಜೆಸಿಬಿ ಯಂತ್ರದ ಚಾಲಕನಾಗಿದ್ದ ಅರ್ಜುನ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಮರಳುತ್ತಿರುವ ವೇಳೆ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹುಕ್ಕೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು: ಯರಗಟ್ಟಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಬಳಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಾಮದುರ್ಗದ ಸಿವಿಲ್ ಇಂಜಿನಿಯರ್ ವಿಶ್ವನಾಥ ರಾಮದುರ್ಗ (24) ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ. ಫೆ.11ರಂದು ವಿಶ್ವನಾಥ ತಮ್ಮ ತಂದೆ ಕಾಶಿನಾಥರನ್ನು ಆಸ್ಪತ್ರೆಗೆ ತೋರಿಸಲು ಬೆಳಗಾವಿಗೆ ಬರುತ್ತಿದ್ದಾಗ ಕಾರು ಪಲ್ಟಿಯಾಗಿತ್ತು. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.