ಶಂಕರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ರಂಗಪ್ಪ ತಳವಾರ, ಸುರೇಶ ಕಲಬುರ್ಗಿ, ಎಚ್.ಎನ್.ಶ್ರೀನಿವಾಸ ಇದ್ದರು. 
ಬೆಳಗಾವಿ

ನಿತ್ಯ ಧ್ಯಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿ

ವಿದ್ಯಾ ಶೆಟ್ಟನಗೌಡ್ರ
ಅಥಣಿ ಗ್ರಾಮೀಣ: ಪಿರಮಿಡ್ ಮಂದಿರದಲ್ಲಿ ಧ್ಯಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ ಎಂದು ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಶಂಕರಹಟ್ಟಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಮಂದಿರದಲ್ಲಿ ಇತ್ತೀಚೆಗೆ ೫ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಪಿರಮಿಡ್ ಧ್ಯಾನಕ್ಕೆ ದಾರಿ ತೋರಿಸುತ್ತದೆ. ಪ್ರತಿಯೊಬ್ಬರೂ ಪಿರಮಿಡ್ ಧ್ಯಾನ ಕೇಂದ್ರ ಬಳಸಿಕೊಳ್ಳಬೇಕು ಎಂದರು.
ಹಿರಿಯ ಪಿರಮಿಡ್ ಮಾಸ್ಟರ್ ರಂಗಪ್ಪ ತಳವಾರ ಮಾತನಾಡಿ, ಸಸ್ಯಾಹಾರ ಮತ್ತು ಪ್ರಾಣಿ ದಯೆ ಬಗ್ಗೆ ಜಾಗೃತಿ ಮೂಡಿಸಿದರು. 
ಇದಕ್ಕೂ ಮುನ್ನ ನೂರಾರು ಸಾಧಕರಿಂದ ಸಾಮೂಹಿಕ ಪಿರಮಿಡ್ ಧ್ಯಾನ ನಡೆಯಿತು. 
ಸುರೇಶ ಕಲಬುರ್ಗಿ, ಎಚ್.ಎನ್.ಶ್ರೀನಿವಾಸ, ಗೂಳಪ್ಪ ನಾಯಿಕ, ವಿಶಾಲಾಕ್ಷಿ ಅಥಣಿ, ಬಸಪ್ಪ ತಳವಾರ, ಮಲ್ಲನಗೌಡ ಪಾಟೀಲ, ಈರಯ್ಯ ಮಠಪತಿ, ಅನಂತಾಚಾರಿ ಕಾಡಲಸ್ಕರ, ರಾಜಶೇಖರ ಬಿಳ್ಳೂರ ಇತರರಿದ್ದರು.