ಕೊಕಟನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ನೋಂದಣಿ ಅಭಿಯಾನದಲ್ಲಿ ವಕೀಲ ಸುಹಾಸ ದಾತಾರ ಮಾತನಾಡಿದರು. ಕೀರ್ತಿ ಕಾಡಗಿ, ಸನ್ಮತಿ ಬೆಳನವಗಿ, ಅರ್ಜುನ ಪೂಜಾರಿ ಇತರರಿದ್ದರು.
ಅಥಣಿ ಗ್ರಾಮೀಣ:
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಆವರಣದಲ್ಲಿ ಗಾಂಧಿ ಗ್ರಾಮೀಣ ಗುರುಕುಲ ಅಥಣಿ, ಕಾರ್ಮಿಕ ಇಲಾಖೆ ಅಥಣಿ ಹಾಗೂ ಕೊಕಟನೂರ ಗ್ರಾಪಂ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಿಮ್ಮ ಜತೆಗೆ ನಾವಿದ್ದೇವೆ’ ಕಾರ್ಮಿಕರ ನೋಂದಣಿ ಅಭಿಯಾನ ಮತ್ತು ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದರು.
ಅಸಂಘಟಿತ ವಲಯದ ಕಾರ್ಮಿಕರನ್ನು ವಿವಿಧ ಯೋಜನೆಗಳ ಮೂಲಕ ಮುಖ್ಯವಾಹಿನಿಗೆ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ. ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ನೋಂದಣಿ ಕಡ್ಡಾಯ. ಅಥಣಿ ತಾಲೂಕಿನಲ್ಲಿ ಕಾರ್ಮಿಕರ ಮಕ್ಕಳ ಏಳಿಗೆಗಾಗಿ ವಸತಿ ಶಾಲೆ ಮಂಜೂರಾಗಿದ್ದು, ಶೀಘ್ರ ಪ್ರಾರಂಭವಾಗಲಿದೆ ಎಂದರು.
ವಕೀಲ ಸುಹಾಸ ದಾತಾರ ಮಾತನಾಡಿ, ಅಥಣಿ ತಾಲೂಕಿನಲ್ಲಿ ಶೇ.60ರಷ್ಟು ಕಾರ್ಮಿಕರು ಅಸಂಘಟಿತರಾಗಿದ್ದಾರೆ. ಕಾರ್ಮಿಕ ಇಲಾಖೆ ನೋಂದಣಿ ಅಭಿಯಾನ ಮೂಲಕ ಸರ್ಕಾರಿ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.