ಅರಟಾಳ ಗ್ರಾಪಂ ಕಾರ್ಯಾಲಯದಲ್ಲಿ ಜಕಣಾಚಾರಿಯರ ಜಯಂತಿ ಆಚರಿಸಲಾಯಿತು. ಪಿಡಿಒ ಮಡಿವಾಳಪ್ಪ ರಾಮಗೊಂಡ, ಶಿವಾನಂದ ಖ್ಯಾಡಿ, ಶ್ರೀಶೈಲ ಬಡಿಗೇರ ಇತರರಿದ್ದರು.
ಅರಟಾಳ: ಪ್ರತಿಯೊಬ್ಬರೂ ಜಕಣಾಚಾರಿ ಅವರಂತೆ ಶಿಲ್ಪಕಲೆ ಕೆತ್ತನೆ ಕೌಶಲ ರೂಢಿಸಿಕೊಳ್ಳಬೇಕು ಎಂದು ಗ್ರಾಪಂ ಪಿಡಿಒ ಮಡಿವಾಳಪ್ಪ ರಾಮಗೊಂಡ ಹೇಳಿದರು.
ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಕಣಾಚಾರಿ ನೂರಾರು ಕಾಲದ ಹಿಂದೆ ಕಲ್ಲಿನಲ್ಲಿ ಕೆತ್ತಿದ ಕಲೆ ರಾಮಾಯಣ, ಮಹಾಭಾರತ ಕಾವ್ಯಗಳ ಬಗ್ಗೆ ತಿಳಿಸಿಕೊಡುತ್ತವೆ. ಜಕಣಾಚಾರಿ ಲೇಖನ, ಕಥೆ ಪುಸ್ತಕ ಓದುವುದರಿಂದ ಅನೇಕ ವಿಷಯ ತಿಳಿಯುತ್ತವೆೆ ಎಂದರು. ಶಿವಾನಂದ ಖ್ಯಾಡಿ, ಶ್ರೀಶೈಲ ಬಡಿಗೇರ, ಅಣ್ಣಪ್ಪ ಕಾಂಬಳೆ, ಯಲ್ಲಪ್ಪ ಹಟ್ಟಿ, ಹಣಮಂತ ಬಡಿಗೇರ, ರಮೇಶ ವಡ್ಡರ, ಮಲ್ಲಿಕಾರ್ಜುನ ಪೂಜಾರಿ, ನಾಮದೇವ ಬಡಿಗೇರ, ಕಾಸಪ್ಪ ಪೂಜಾರಿ, ವಿಲಾಸ ಮಾಳಿ, ಧರೇಪ್ಪ ಹಟ್ಟಿ, ಕಲ್ಲಪ್ಪ ಮಾದರ ಇತರರಿದ್ದರು.