ಅಥಣಿ ಮೋಟಗಿಮಠದಲ್ಲಿ ಗಣ್ಯರು ಕೃತಿ ಲೋಕಾರ್ಪಣೆ ಮಾಡಿದರು. ಪ್ರಭುಚನ್ನಬಸವ ಸ್ವಾಮೀಜಿ, ಬಿ.ಎಲ್. ಪಾಟೀಲ, ಪ್ರಕಾಶ ಗಿರಿಮಲ್ಲನವರ, ಡಾ.ಎ.ಎಲ್. ದೇಸಾಯಿ, ಬಸವರಾಜ ಹಳಿಂಗಳಿ ಇತರರಿದ್ದರು. 
ಬೆಳಗಾವಿ

ಒತ್ತಡದಿಂದ ಓದುವ ಹವ್ಯಾಸ ಕಡಿಮೆ

ಅಧ್ಯಾತ್ಮ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಪ್ರಸಾರ ಮಾಡುತ್ತಿದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಮೋಟಗಿಮಠದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ.ಗುರುಬಸವ ಸ್ವಾಮೀಜಿ 41ನೇ ಸ್ಮರಣೋತ್ಸವ ಮತ್ತು ಶ್ರೀಗುರುವಚನ ಪ್ರಭ ಪುಸ್ತಕ ಪ್ರಕಾಶಕ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಒತ್ತಡದ ಬದುಕಿನಿಂದ ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಈಗಿನಿಂದಲೇ ಸಂಸ್ಕೃತಿ, ಸಂಸ್ಕಾರ ಕಲಿಸುವುದು ಅವಶ್ಯ ಎಂದರು.
ಸಾಹಿತಿ ಪ್ರಕಾಶ ಗಿರಿಮಲ್ಲನ್ನವರ ಮಾತನಾಡಿ, ಸದ್ಗುಣಗಳ ಸಂಗಮವೇ ಅಥಣಿ ಮೋಟಗಿಮಠ. ಸಾಹಿತ್ಯ, ಪ್ರವಚನ, ಸಂಗೀತದ ಮೂಲಕ ನಾಡಿಗೆ ಪರಚಿತವಾಗಿರುವ ಮೋಟಗಿಮಠವು ಅಧ್ಯಾತ್ಮದ ಶಕ್ತಿಕೇಂದ್ರವಾಗಿದೆ. ಸಾಹಿತ್ಯ ಕೃಷಿ ಇಲ್ಲಿ ನಿರಂತರವಾಗಿದ್ದು, ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ, ಕಂಬತ್ತಳ್ಳಿ ಜೀವನ ಕತೆಗಳು, ಶ್ರೀ ಗುರು ವಚನಪ್ರಭ ಮೂರು ಕೃತಿಗಳು ಲೋಕಾರ್ಪಣೆಯಾಗಿವೆ. ಇವುಗಳ ಕುರಿತು ಮಕ್ಕಳಿಗೆ ತಿಳಿಸುವುದು ಅವಶ್ಯ ಎಂದರು.
ಬಿ.ಎಲ್.ಪಾಟೀಲ ಮಾತನಾಡಿದರು. ಧಾರವಾಡದ ಸಾಹಿತಿ ಡಾ.ಎ.ಎಲ್.ದೇಸಾಯಿ, ರಾಮಣ್ಣ ಗೂಗವಾಡ, ಬಸವರಾಜ ಹಳಿಂಗಳಿ, ಪ್ರಕಾಶ ಮಹಾಜನ, ಶ್ರೀಶೈಲ ಸಂಕ, ಅಜ್ಜಪ್ಪ ಕಾವೇರಿ, ಎಂ.ಡಿ.ತೊದಲಬಾಗಿ, ಶಶಿಕಾಂತ ಹುಲಕುಂದ, ಶಂಕರ ಬುಕಿಟಗಾರ, ಭರತ ಸೊಮಯ್ಯ, ಗಿರೀಶ ದಿವಾನಮಳ, ಮಲಗೌಡ ಪಾಟೀಲ, ಜಗದೀಶ ಗೆಜ್ಜಿ, ಮುರುಗೇಶ ಬಾನಿ, ಗಜಾನನ ಗಸ್ತಿ, ರಮೇಶ ಪಾಟೀಲ, ಮಹಾಂತೇಶ ಉಕ್ಕಲಿ, ಸಂಗಮೇಶ ಹಚಡದ ಇತರರಿದ್ದರು.