ನಂದಗಡದಲ್ಲಿ ಅಧಿಕಾರಿಗಳೊಂದಿಗೆ ಸಚಿವ ಶಿವರಾಜ್ ತಂಗಡಗಿ ಸಭೆ ನಡೆಸಿದರು. ಶಾಸಕ ವಿಠ್ಠಲ್ ಹಲಗೇಕರ, ಎಚ್.ಎಂ.ರೇವಣ್ಣ, ವಿನಯ ನಾವಲಗಟ್ಟಿ ಇತರರಿದ್ದರು. 
ಬೆಳಗಾವಿ

19ರಂದು ರಾಯಣ್ಣ ಮ್ಯೂಸಿಯಂ ಉದ್ಘಾಟನೆ

ಸಮೀಪದ ನಂದಗಡದಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣ ಮರಣದಂಡನೆ ಸ್ಥಳ, ಸಮಾಧಿ ಸ್ಥಳ ಮತ್ತು ಕುಂಬಾರ ಕೆರೆ ಪ್ರದೇಶದಲ್ಲಿನ ಅಭಿವೃದ್ಧಿ ಕಾರ್ಯ ಹಾಗೂ ಸಿದ್ಧತೆ ಪರಿಶೀಲಿಸಿ ಮಾತನಾಡಿದರು. 23 ಕೋಟಿ ರೂ.ವೆಚ್ಚದಲ್ಲಿ ರಾಯಣ್ಣನ ಸಮಾಧಿಯ ಪಕ್ಕ ಗ್ಲಾಸ್ ಹೌಸ್ ನಿರ್ಮಿಸುವ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವುದು. ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಆಧರಿಸಿದ ಅರ್ಧ ಗಂಟೆಯ ಚಲನಚಿತ್ರ ಪ್ರದರ್ಶಿಸಲು ವಸ್ತುಸಂಗ್ರಹಾಲಯದಲ್ಲಿಯೇ ಸುಸಜ್ಜಿತ ಮಿನಿ ರಂಗಮಂದಿರ ವ್ಯವಸ್ಥೆ ಮಾಡಲಾಗಿದೆ ಎಂದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ತಾಲೂಕಿನ ಇತರ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಮೂಲಸೌಕರ್ಯ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿನಯ ನಾವಲಗಟ್ಟಿ, ಸೂರ್ಯಕಾಂತ ಕುಲಕರ್ಣಿ, ಅಧ್ಯಕ್ಷ ಈಶ್ವರ್ ಘಾಡಿ, ಮಹಾಂತೇಶ ರಾವುತ, ಪ್ರಕಾಶ ಮಾದರ, ದೇಮಣ್ಣ ಬಾಸ್ರಿಕಟ್ಟಿ, ಸಾವಿತ್ರಿ ಮಾದರ, ದೀಪಾ ಪಾಟೀಲ, ಭರತೇಶ ಟೊರೋಜಿ, ದೀಪಕ ಕವತಂಕರ, ಪರಸಪ್ಪ ಹಾಲ್ಭಾವಿ, ನಂದಗಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಗುರವ ಇತರರಿದ್ದರು.