ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ತಾಲೂಕಾಡಳಿತ, ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಕನ್ನಡಪರ ಸಂಘಟನೆಗಳಿಂದ ಶುಕ್ರವಾರ ಸಂಗೊಳ್ಳಿ ರಾಯಣ್ಣ ಜ್ಯೋತಿ ಬರಮಾಡಿಕೊಂಡು ಮಾತನಾಡಿದರು. 
ಬೆಳಗಾವಿ

ರಾಯಣ್ಣ ಆದರ್ಶ ಎಲ್ಲರಿಗೂ ಸ್ಪೂರ್ತಿ

ಕಾಗವಾಡ: ಸಂಗೊಳ್ಳಿ ರಾಯಣ್ಣನ ಸಾಹಸಗಾಥೆ ಜಗತ್ತಿಗೆ ತಿಳಿಸಲು ನಾಡಿನಾದ್ಯಂತ ರಾಯಣ್ಣ ಜ್ಯೋತಿ ಸಂಚರಿಸುತ್ತಿದೆ. ರಾಯಣ್ಣನ ಆದರ್ಶ ಎಲ್ಲರಿಗೂ ಸ್ಪೂರ್ತಿ ಎಂದು ಗ್ರೇಡ್-2 ತಹಸೀಲ್ದಾರ್ ರಶ್ಮಿ ಜಕಾತಿ ಹೇಳಿದರು.
ಪಟ್ಟಣದ ಚನ್ನಮ್ಮ ವೃತ್ತದಲ್ಲಿ ತಾಲೂಕಾಡಳಿತ, ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಕನ್ನಡಪರ ಸಂಘಟನೆಗಳಿಂದ ಶುಕ್ರವಾರ ಸಂಗೊಳ್ಳಿ ರಾಯಣ್ಣ ಜ್ಯೋತಿ ಬರಮಾಡಿಕೊಂಡು ಮಾತನಾಡಿದರು.
ಬಳಿಕ ವಿವಿಧ ವಾದ್ಯಮೇಳ, ಕುಂಭಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೀಳ್ಕೊಡಲಾಯಿತು. ಬಿಇಒ ಎಂ.ಬಿ.ಮದಬಾವಿ, ಸಿಡಿಪಿಒ ರವೀಂದ್ರ ಗುದಗೆನ್ನವರ, ಶಿರಸ್ತೇದಾರ ಎಂ.ಆರ್. ಪಾಟೀಲ, ಸುರೇಖಾ ಬಸನಾಯಿಕ, ಪಿಎಸ್‌ಐ ರಾಘವೇಂದ್ರ ಖೋತ, ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಪಿ.ತಳವಾರ, ಕರವೇ ಅಧ್ಯಕ್ಷ ಸಿದ್ದು ಒಡೆಯರ, ಸಚಿನ ಗಾವಡೆ, ಬಾಬಾಸಾಬ್ ಕೊತ್ತಲಗಿ, ಸಿದ್ದು ಭಾನೂಸೆ, ಋಷಿ ಭಾನೂಸೆ, ಸದಾಶಿವ ಪೂಜಾರಿ ಇತರರಿದ್ದರು.