ಚಿಕ್ಕೋಡಿ ಪಟ್ಟಣದ ಶ್ರೀ ರವಳನಾಥ ಹೌಸಿಂಗ್ ೈನಾನ್ಸ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಪಾದನಾ ಸ್ವಾಮೀಜಿ ಮಾತನಾಡಿದರು. ಆರ್.ಎಂ.ಚೌಗಲಾ, ಜೆ.ಡಿ.ಬೋಕೆ, ಡಾ.ಬಿ.ಬಿ.ಪಾಟೀಲ ಇತರರಿದ್ದರು. 
ಬೆಳಗಾವಿ

ರವಳನಾಥ ಕಾರ್ಯ ಶ್ಲಾಘನೀಯ

ಪ್ರಶಾಂತ ಹೂಗಾರ
ಚಿಕ್ಕೋಡಿ: ಕಾಯಕವೇ ಕೈಲಾಸ ಎಂಬಂತೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ರವಳನಾಥ ಹೌಸಿಂಗ್ ೈನಾನ್ಸ್ ಶಾಖೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಅನ್ನ ನೀಡುವ ರೈತ, ಅಕ್ಷರ ಕಲಿಸುವ ಶಿಕ್ಷಕ, ಗಡಿ ಕಾಯುವ ಸೈನಿಕರಿಂದ ದೇಶ ಸದೃಢವಾಗಿದೆ. ಅದೇ ರೀತಿ ಸಮಾಜಮುಖಿ ಕಾರ್ಯೋನ್ಮುಖವಾಗಿರುವ ರವಳನಾಥ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಮಹಾರಾಷ್ಟ್ರದ ಗಡಹಿಂಗ್ಲಜ್‌ನ ರವಳನಾಥ ಹೌಸಿಂಗ್ ೈನಾನ್ಸ್ ಸಂಸ್ಥೆ ಸಂಸ್ಥಾಪಕ ಎಂ.ಎಲ್.ಚೌಗಲೆ ಮಾತನಾಡಿ, ಸಹಕಾರ ಕೇವಲ ಹಣಕಾಸಿನ ವ್ಯವಹಾರ ಮಾತ್ರವಲ್ಲದೆ ಸಂಸ್ಥೆ ಅಡಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ರವಳನಾಥ ಸಂಸ್ಥೆ ಕೈಗೆತ್ತಿಕೊಂಡಿದೆ. ಚಿಕ್ಕೋಡಿ ಶಾಖೆ ಒಂದು ವರ್ಷದಲ್ಲಿ 3 ಕೋಟಿ ರೂ. ವ್ಯವಹಾರ ನಡೆಸಿದೆ ಎಂದರು.
ಪ್ರಧಾನ ಶಾಖೆ ನಿರ್ದೇಶಕ ಡಾ.ಆರ್.ಎಸ್.ನಿಳಪನ್ಕರ, ಡಾ.ಬಿ.ಬಿ.ಪಾಟೀಲ ಮಾತನಾಡಿದರು.
ಸುಭಾಷ ಕಮತೆ, ಬಸವರಾಜ ಕೊಟಬಾಗಿ, ಅಡಿವೆಪ್ಪ ಗುರುಲಿಂಗಗೋಳ, ಸಾವಯವ ಕೃಷಿ ಸಾಧಕ ಅರುಣ ಮಾಳಿ ಸೇರಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ಹೊಸಪಲ್ಲೆ, ಡಿ.ಕೆ.ಮಾಯದೇವ, ಚಿಕ್ಕೋಡಿ ಶಾಖಾ ವ್ಯವಸ್ಥಾಪಕ ಅಮರ ಚೌಗಲಾ ಇತರರಿದ್ದರು. ಶಾಖೆ ಅಧ್ಯಕ್ಷ ಜೆ.ಟಿ.ಬೋಕೆ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ಕಾಜಗಾರ ನಿರೂಪಿಸಿದರು. ಕವಿತಾ ಧರಿಗೌಡರ ವಂದಿಸಿದರು.