ಅಥಣಿ ತರಕಾರಿ ಮಾರುಕಟ್ಟೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಯುವ ಮುಖಂಡ ಚಿದಾನಂದ ಸವದಿ ಭೂಮಿಪೂಜೆ ನೆರವೇರಿಸಿದರು. ಶಿವಲೀಲಾ ಬುಟಾಳೆೆ, ಭುವನೇಶ್ವರಿ ಯಂಕಚ್ಚಿ, ಅಶೋಕ ಗುಡಿಮನಿ, ದತ್ತಾ ವಾಸ್ಟರ್, ಪ್ರಕಾಶ ಮಹಾಜನ, ಪ್ರಮೋದ ಬಿಳ್ಳೂರ ಇತರರು ಇದ್ದರು. 
ಬೆಳಗಾವಿ

ತ್ವರಿತಗತಿಯಲ್ಲಿ ಅಥಣಿ ಪ್ರಗತಿ

ಪ್ರಶಾಂತ ಹೂಗಾರ
ಅಥಣಿ: ಶಾಸಕ ಲಕ್ಷ್ಮಣ ಸವದಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ, ಅಥಣಿ ಜಿಲ್ಲೆಯಲ್ಲಿಯೇ ತ್ವರಿತಗತಿಯಲ್ಲಿ ಪ್ರಗತಿಯತ್ತ ಸಾಗುತ್ತಿರುವ ತಾಲೂಕಾಗಿದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ 13.29 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದರು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಪುರಸಭೆ ಸದಸ್ಯರಾದ ಪ್ರಮೋದ ಬಿಳ್ಳೂರ, ಸಯ್ಯದ್‌ಅಮೀನ್ ಗದ್ಯಾಳ, ಮಲ್ಲಿಕಾರ್ಜುನ ಬುಟಾಳೆ, ಕಲ್ಮೇಶ ಮಡ್ಡಿ, ಮೃಣಾಲಿನಿ ದೇಶಪಾಂಡೆ, ವಿಲಿನ ಯಳಮಲೆ, ರಿಯಾಜ್ ಸನದಿ, ರಾಮನಗೌಡ ಪಾಟೀಲ, ವಿನಾಯಕ ದೇಸಾಯಿ, ಶಶಿಕಾಂತ ಹುಲಕುಂದ, ಪ್ರಕಾಶ ಮಹಾಜನ, ರವಿ ಬಡಕಂಬಿ, ಬಸು ಹಳ್ಳದಮಳ, ವಿಜಯ ರಜಪುತ, ನಿತಿನ ಘೊಂಗಡಿ, ಗುತ್ತಿಗೆದಾರ ರಮೇಶ ದುಮ್ಮಾಳೆ, ಅಮಿತ ಮಹಾಜನ ಇತರರಿದ್ದರು.