ದಡ್ಡಿ ಗ್ರಾಮದಲ್ಲಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ವತಿಯಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಬಸವರಾಜ ಜಾಂಬೋಟಿ, ಗಂಗೂಬಾಯಿ ವಡ್ಡರ, ಲಕ್ಷ್ಮೀ ಗುದ್ದಗಿ, ಲಕ್ಷ್ಮೀ ಅಸೋಲೆ ಇತರರಿದ್ದರು. 
ಬೆಳಗಾವಿ

ರಾಮ್‌ಜಿ ಯೋಜನೆ ಹಿಂಪಡೆಯಲಿ

ಪ್ರಶಾಂತ ಹೂಗಾರ
ದಡ್ಡಿ: ಕೇಂದ್ರ ಸರ್ಕಾರ ಮನರೇಗಾ ಯೋಜನೆ ಮಾರ್ಪಡಿಸಿ ರೂಪಿಸಿದ ವಿಬಿಜಿ ರಾಮ್‌ಜಿ ಯೋಜನೆಯನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮದಲ್ಲಿ ಮಂಗಳವಾರ ಗ್ರಾಮೀಣ ಕೂಲಿಕಾರ್ಮಿಕರು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹೊಸದಾಗಿ ರೂಪಿಸಿರುವ ಜಿ ರಾಮ್ ಜಿ ಯೋಜನೆ ಬಡ ಮತ್ತು ಮಧ್ಯಮ ವರ್ಗದ ಉದ್ಯೋಗದ ಹಕ್ಕು ಕಸಿದುಕೊಳ್ಳುತ್ತಿದೆ. ಆದ್ದರಿಂದ ಜ.27ರಿಂದ ಆರಂಭವಾಗುವ ಮಹಿಳಾ ಗ್ರಾಮಸಭೆಯಲ್ಲಿ ಜಿ ರಾಮ ಜಿ ಯೋಜನೆ ರದ್ದುಪಡಿಸಿ, ಈ ಮೊದಲಿದ್ದ ಮನರೇಗಾ ಯೋಜನೆ ಯಥಾವತ್ತಾಗಿ ಮುಂದುವರಿಸುವಂತೆ ಒತ್ತಾಯಿಸಿದರು.
ಪಂಚಾಯಿತಿ ಸಿಬ್ಬಂದಿ ಬಸವರಾಜ ಜಾಂಬೋಟಿ, ಗಂಗೂಬಾಯಿ ವಡ್ಡರ, ಲಕ್ಷ್ಮೀ ಗುದ್ದಗಿ, ಲಕ್ಷ್ಮೀ ಅಸೋಲೆ, ರೂಪಾ ಪಾಮನಾಯಕ, ಸಂಜೀವನಿ ಇಂಗವಲೆ, ಬೊಬ್ಬಿತಾ ನಾರ್ವೇಕರ, ಮಾರುತಿ ಹರಾಡೆ, ಸರಿತಾ ಸಾಲಗೋಡೆ, ಗಾಯತ್ರಿ ಪಾಂಡವ, ರೇಷ್ಮಾ ಕೋಟೆಕರ, ಭೀಮಾ ವಡ್ಡರ, ಸಪ್ನ ನಾರ್ವೆಕರ, ರೇಖಾ ಜರಳಿ, ಅನಿತಾ ಸಾಲಗೋಡೆ, ಲಕ್ಷ್ಮೀ ಬಂಡೆರ ಇತರರಿದ್ದರು.