ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ
ಬೆಳಗಾವಿ: ರಾಮತೀರ್ಥ ನಗರದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಏ.1 ಮತ್ತು 2ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಏ. 1ರಂದು ಸಂಜೆ ವಿವಿಧ ಸ್ಪರ್ಧೆಗಳೊಂದಿಗೆ ಜರುಗಲಿವೆ. ಮಾ.2ರಂದು ಬೆಳಗ್ಗೆ 6ಕ್ಕೆ ರುದ್ರಾಭಿಷೇಕ, ತೊಟ್ಟಿಲು ಸೇವೆ, 8ಕ್ಕೆ ಉಚಿತ ಅರೋಗ್ಯ ತಪಸಣೆ ಜರುಗಲಿದೆ. ಸಂಜೆ ಸಂಜೆ 4ಕ್ಕೆ ಜರುಗುವ ಪೂರ್ಣ ಕುಂಭಮೇಳವನ್ನು ವಚನಾನಂದ ಸ್ವಾಮೀಜಿ ಮತ್ತು ಗುರುಸಿದ್ಧ ಸ್ವಾಮೀಜಿ ಉದ್ಘಾಟಿಸುವರು.
ಅದೇ ದಿನ 5.30ಕ್ಕೆ ಜರುಗುವ ವಾರ್ಷಿಕೋತ್ಸವ ಸಮಾರಂಭವನ್ನು ಸಚಿವ ಸತೀಶ ಜಾರಕೀಹೊಳಿ ಉದ್ಘಾಟಿಸುವರು. ನಿವೃತ್ತ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಶಾಸಕ ಆಸೀಫ್ ಸೇಠ್, ವಿನಯ ನಾವಲಗಟ್ಟಿ, ಶಂಕರಗೌಡ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಉಪಮೇಯರ್ ಹನುಮಂತ ಕೊಂಗಾಲಿ, ಡಾ.ಬಸವರಾಜ ವೀರಾಪೂರ, ಸೋಮನಗೌಡಾ ಪಾಟೀಲ, ಮದನಕುಮಾರ ಭೈರಪ್ಪನವರ, ಡಾ.ರವಿ ಪಾಟೀಲ, ಮುರಘೇಂದ್ರಗೌಡ ಪಾಟೀಲ ಇತರರು ಪಾಲ್ಗೊಳ್ಳುವರು.