ಬೆಳಗಾವಿ ನಗರದ ಕೆಎಲ್​ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನಗದು ಬಹುಮಾನ ಮಹಾಂತೇಶ ಕವಟಗಿಮಠ, ಬಿ.ಎ.ಪಾಟೀಲ ಪ್ರದಾನ ಮಾಡಿದರು. ಡಾ. ಬಾಬಾಗೌಡ ಪಾಟೀಲ, ರಾಜಶೇಖರ ತಿಲಗಂಜಿ ಇತರರಿದ್ದರು. 
ಬೆಳಗಾವಿ

Quality education is the goal of KLE: Mahantesh Kavatagimath

ಬೆಳಗಾವಿ: ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಂಗಕ್ಕೆ ನೆರವಾಗಬಲ್ಲ ಅರ್ಹ ವಕೀಲರ ಅಗತ್ಯವಿದೆ ಎಂದು ಮಾಜಿ ಎಂಎಲ್​ಸಿ, ಕೆಎಲ್​ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಕೆಎಲ್​ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯವು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕೆಎಲ್​ಇ ಸಂಸ್ಥೆಯ ಉದ್ದೇಶ ಗುಣಮಟ್ಟದ ಶಿಣ ನೀಡುವುದು ಹಾಗೂ ಸಮಾಜ ಸೇವೆಯಲ್ಲಿ ತೊಡಗುವ ಕೌಶಲ್ಯಪೂರ್ಣ ವಿದ್ಯಾರ್ಥಿಗಳನ್ನು ರೂಪಿಸುವುದಾಗಿದೆ ಎಂದು ಹೇಳಿದರು.
ಕರ್ನಾಟಕ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ ಮಾತನಾಡಿ, ಕ್ಲೆಂಟ್​ ಕೌನ್ಸೆಲಿಂಗ್​ ಕೇವಲ ಕಾನೂನು ಪ್ರಕ್ರಿಯೆಯ ಒಂದು ಭಾಗವಲ್ಲ, ಇದು ವಕೀಲರ ವ್ಯಕ್ತಿತ್ವ ನಿರ್ಮಾಣಕ್ಕೆ ಮತ್ತು ನೈತಿಕತೆ ಬೆಳವಣಿಗೆಗೆ ಅತ್ಯುತ್ತಮ ಮಾರ್ಗವಾಗಿದೆ. ಇದು ವಕೀಲರ ಮಾನಸಿಕ ಶಕ್ತಿ, ಸಹಾನುಭೂತಿ ಮತ್ತು ವ್ಯಾಪಕ ದೃಷ್ಟಿಕೋನ ವೃದ್ಧಿಸುತ್ತದೆ. ಕಾನೂನು ವೃತ್ತಿ ಒಂದು ಮಾನವೀಯ ಹಾಗೂ ಚಿಕಿತ್ಸಕ ವೃತ್ತಿಯಾಗಿದೆ. ವಕೀಲರು ತಮ್ಮ ಕದಾರರ ಮಾತುಗಳನ್ನು ಕೇವಲ ಕೇಳುವುದಲ್ಲ, ಅವುಗಳನ್ನು ಗಾಢವಾಗಿ ಅರ್ಥಮಾಡಿಕೊಳ್ಳುವುದು, ಅಗತ್ಯ ಮಾಹಿತಿಯನ್ನು ಜಾಗರೂಕತೆಯಿಂದ ಸಂಗ್ರಹಿಸುವುದು ಮತ್ತು ಅವರ ಭಾವನೆಗಳಿಗೆ ಪ್ರಾಮಾಣಿಕತೆಯಿಂದ ನ್ಯಾಯ ಒದಗಿಸುವುದು ಅತ್ಯಂತ ಅವಶ್ಯವಾಗಿದೆ ಎಂದರು.
ಗೋವಾದ ವಿ.ಎಂ. ಸಾಲಗಾಂವ್ಕರ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಬಾಬಾಗೌಡ ಪಾಟೀಲ ಮಾತನಾಡಿ, ಕೃತಕ ಬುದ್ಧಿಮತ್ತೆ ಯುಗದಲ್ಲಿ ಾನಕ್ಕಿಂತ ಬದುಕುಳಿಯುವ ಕೌಶಲ ಮುಖ್ಯವಾಗಿದೆ ಎಂದರು.
ಬಾಗಲಕೋಟೆಯ ಹಿರಿಯ ಸಿವಿಲ್​ ನ್ಯಾಯಾಧೀಶ ರಾಜಶೇಖರ ತಿಲಗಂಜಿ ಮಾತನಾಡಿ, ನ್ಯಾಯಾಂಗ ೇತ್ರದ ಹೊರತಾಗಿಯೂ ಕಾನೂನು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೆಎಲ್​ಇ ಸಂಸ್ಥೆಯ ಎಸ್​.ಎ.ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ 10,000 ರೂ. ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಯಿತು. ದ್ವೀತಿಯ 7,500 ರೂ. ನಗದು ಬಹುಮಾನವನ್ನು ಆರ್​.ಎಲ್​.ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿಗಳು ಪಡೆದರು. ಗೋವಾದ ಸಾಲಗಾಂವ್ಕರ್​ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಕೌನ್ಸಿಲರ್​ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕಾನೂನು ರಸಪ್ರಶ್ನೆ ಸ್ಪರ್ಧೆಯಲ್ಲಿ ಧಾರವಾಡದ ಹುರಕಡ್ಲಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜೇತರಾದರು. ಹುಬ್ಬಳ್ಳಿಯ ಕೆಎಸ್​ಎಲ್​ಯು ಲಾ ಸ್ಕೂಲ್​ ತಂಡವು ರನ್ನರ್​&ಅಪ್​ ಸ್ಥಾನ ಪಡೆಯಿತು. ಪ್ರಾಂಶುಪಾಲೆ ಡಾ.ಜ್ಯೋತಿ ಹಿರೇಮಠ, ಡಾ.ಸುಪ್ರಿಯಾ ಸ್ವಾಮಿ, ಡಾ.ಸಂತೋಷ ಪಾಟೀಲ ಇತರರಿದ್ದರು.