ಸವದತ್ತಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸತೀಶಕುಮಾರ ಎಂ. ಮಾತನಾಡಿದರು. ಮಲ್ಲಿಕಾರ್ಜುನ ಹೆಗ್ಗನ್ನವರ, ಎಸ್.ಎಸ್.ವನಕಿ, ಎಂ.ಎಂ.ಮಾಹುತ ಇತರರಿದ್ದರು.
ಸವದತ್ತಿ:
ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಕ್ಷೇತ್ರದಲ್ಲಿ ಒಟ್ಟು 233 ಮತಗಟ್ಟೆಗಳಿದ್ದು, 2,06,128 ಮತದಾರರಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
ಅರ್ಹರ ಹೆಸರು ಸೇರ್ಪಡೆ, ಮೃತರು, ಸ್ಥಳಾಂತರಗೊಂಡವರ ಹಾಗೂ ನಕಲಿ ದಾಖಲೆಗಳ ವಿಲೇವಾರಿ ಕಾರ್ಯ ನಡೆಯುತ್ತಿದೆ. ಮತದಾರರಿಗೆ ಗಣತಿ ನಮೂನೆ ವಿತರಿಸಿ ಭರ್ತಿ ಮಾಡಿಸಿಕೊಳ್ಳಲಾಗುತ್ತಿದ್ದು, ನಮೂನೆಗಳನ್ನು ಶೇ.100ರಷ್ಟು ವಿತರಿಸಲಾಗಿದೆ. ಇದುವರೆಗೆ 1,73,954 ನಮೂನೆಗಳನ್ನು (ಶೇ.84.39) ಡಿಜಿಟಲೀಕರಣಗೊಳಿಸಿದ್ದು, ಸ್ಥಳಾಂತರ, ಮರಣ ಹಾಗೂ ಡಬಲ್ ನೋಂದಣಿ ಸೇರಿ 4,847 ಪ್ರಕರಣಗಳು ಗುರುತಿಸಲಾಗಿದೆ ಎಂದರು. ಮನೆಮನೆಗೆ ಭೇಟಿ ಕಾರ್ಯ ಆಗಷ್ಟ 8ರವರೆಗೆ ನಡೆಯಲಿದ್ದು, ಆ.17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.
ಆ.17ರಿಂದ ಸೆ.16ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಮತದಾರರು ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ಒದಗಿಸಿ ಪರಿಷ್ಕರಣೆಗೆ ಸಹಕರಿಸಬೇಕು ಎಂದರು. ಬಿಒಒ ಅಕ್ಬರಲಿ ಖಾಜಿ, ಪೌರಾಯುಕ್ತ ಸಂಗನಬಸಯ್ಯ ಗದ್ದಗಿಮಠ, ಗ್ರೇಡ್-2 ತಹಸೀಲ್ದಾರ್ ಎಂ.ಎನ್.ಮಠದ, ಚುನಾವಣಾ ಶಿರಸ್ತೇದಾರ ಎಸ್.ಎಸ್.ವನಕಿ, ಚುನಾವಣಾ ವಿಷಯ ನಿರ್ವಾಹಕ ಎಂ.ಎಂ.ಮಾಹುತ, ಮಲಿಕ್ ಹಲೀಮನವರ ಇತರರಿದ್ದರು.