ಜಾಲಿಕಟ್ಟಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಶ್ವಾಸ ವೈದ್ಯ, ಚಂದ್ರು ಜಂಬ್ರಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಕಡಬಿ, ಪ್ರಕಾಶ ನರಿ, ಚನ್ನಯ್ಯ ಪೂಜೇರ ಇತರರಿದ್ದರು.
ತಲ್ಲೂರ: ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆಸಕ್ತಿಯಿಂದ ಓದಿದರೆ ಖಂಡಿತ ಯಶಸ್ಸು ಪಡೆಯಬಹುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಈಚೆಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ
ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನಕ್ಕೆ ವಿದ್ಯೆ ಬಹಳ ಅವಶ್ಯ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಕಡಬಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಗ್ರಾಪಂ ಮಾಜಿ ಸದಸ್ಯ ಚನ್ನಯ್ಯ ಪೂಜೇರ, ವಿರೂಪಾಕ್ಷಯ್ಯ ಪೂಜೇರಿ, ವೈ.ಎ್. ನಾಯ್ಕರ, ಮಲ್ಲಿಕಾರ್ಜುನ ಯಡಳ್ಳಿ, ಮಲ್ಲನಾಯ್ಕ ನಾಯ್ಕರ, ಬಸವರಾಜ ಕುಂಬಾರ, ಬಸಪ್ಪ ಬಡ್ರೋಳ್ಳಿ, ಈರಯ್ಯ ಗೌಡರ, ಗೌಡಪ್ಪ ನಾಯ್ಕರ, ವೆಂಕಣ್ಣ ಯರಡ್ಡಿ, ವೆಂಕಣ್ಣ ಕಮಕೇರಿ, ಕಲ್ಮೇಶ ಯಡಳ್ಳಿ, ಗಂಗಯ್ಯ ಗೌಡರ, ಪ್ರಕಾಶ ನಾಯ್ಕರ, ನಿಂಗಪ್ಪ ಬೀರಪ್ಪನವರ, ಕಲ್ಮೇಶ ಬಾಲರೆಡ್ಡಿ ಇತರರಿದ್ದರು.