ಬೈಲಹೊಂಗಲದ ಕಾರ್ಮೆಲ್ ವಿದ್ಯಾವಿಕಾಸ ಬುದ್ಧಿಮಾಂದ್ಯ ಶಾಲಾ ಮಕ್ಕಳಿಗೆ ಗಣ್ಯರು ಹಣ್ಣು-ಹಂಪಲು ವಿತರಿಸಿದರು. ಬಸವಲಿಂಗ ಶ್ರೀಗಳು, ಸಿದ್ಧಾರೂಢ ಶರಣರು, ಬಸವರಾಜ ಜನ್ಮಟ್ಟಿ, ಶೋಭಾ ಛಬ್ಬಿ ಇತರರಿದ್ದರು.
ಬೈಲಹೊಂಗಲ: ಸಾಮಾಜಿಕ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಉಳಿದು ಗೌರವಕ್ಕೆ ಪಾತ್ರರಾಗಲು ಸಾಧ್ಯವೆಂದು ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು ಹೇಳಿದರು.
ನಗರದ ಕಾರ್ಮೆಲ್ ವಿದ್ಯಾ ವಿಕಾಸ ಕೇಂದ್ರ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಭಾನುವಾರ ಬಸವ ಪಂಚಮಿ ನಿಮಿತ್ತ ಮಹೇಶ ಕೋಟಗಿ ಮಕ್ಕಳಿಗೆ ಹಣ್ಣು-ಹಾಲು ವಿತರಿಸಿ ಮಾತನಾಡಿ, ಅಸಹಾಯಕರ ಬದುಕಿಗೆ ಭರವಸೆ ನೀಡಿದಾಗ ಮಾತ್ರ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದರು.
ಹಿಪ್ಪರಗಿಯ ಸಿದ್ಧಾರೂಢ ಶರಣರು, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಬಸವರಾಜ ಬೋಳಗೌಡ್ರ, ಹಿರಿಯರಾದ ಐ.ಎಲ್.ಪಾಟೀಲ, ನಿವೃತ್ತ ಶಿಕ್ಷಕ ಎಸ್.ಎಂ.ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಮಹೇಶ ಕೋಟಗಿ, ಕದಳಿ ಮಹಿಳಾ ಸಂಘಟಣೆ ಜಿಲ್ಲಾಧ್ಯಕ್ಷೆ ಪ್ರೇಮಾ ಅಂಗಡಿ, ಚಂದ್ರಶೇಖರ ಕೊಪ್ಪದ, ಬಸವರಾಜ ಬಡಿಗೇರ, ಬಸವಂತ ತಲ್ಲೂರ, ಬಸವರಾಜ ಶಿಂತ್ರಿ, ಶ್ರೀಶೈಲ ಗದಗ, ಎಸ್.ಎಂ.ಪಾಟೀಲ, ಶೋಭಾ ಛಬ್ಬಿ, ಶ್ರೀಶೈಲ ಶರಣಪ್ಪನವರ, ಮಂಜುನಾಥ ಶರಣಪ್ಪನವರ, ಅಜ್ಜಪ್ಪ ಅಂಗಡಿ, ಸಾವಿತ್ರಿ ಹೊತ್ತಗಿಮಠ. ಪ್ರಾಂಶುಪಾಲೆ ರೀಟಾ, ಲಿಲ್ಲಿಯಾನ, ಲೂಸಿ ಇತರರಿದ್ದರು.