ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಸಿದ್ದರಾಯ ಬೋಸಗಿಗೆ ಮನವಿ ಸಲ್ಲಿಸಿದರು. ಮಹಾದೇವ ಮಡಿವಾಳ, ಕಿರಣ ಮಿಸಾಳ, ಸಂಗಪ್ಪ ಕರಿಗಾರ, ರಮೇಶ ಕುಂಬಾರ, ಬಾಹುಬಲಿ ಸಂಕನ್ನವರ, ದುಂಡಪ್ಪ ತನ್ನಂಗಿ ಇತರರಿದ್ದರು.
ಅಥಣಿ ಗ್ರಾಮೀಣ:
ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ತಾಲೂಕಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಇದೂವರೆಗೂ ಬಿಲ್ ಪಾವತಿಸಿಲ್ಲ. ರಸಗೊಬ್ಬರ ಹಾಗೂ ಬೀಜದ ಕೊರತೆ ಎದ್ದು ಕಾಣುತ್ತಿದೆ. ಕೆಲ ಅಂಗಡಿಕಾರರು ಯೂರಿಯಾಗೆ ಲಿಂಕ್ ಇಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಬೇಕಾಗುವ ಗೊಬ್ಬರ ಸುಲಭವಾಗಿ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಹವಾಮಾನಕ್ಕೆ ತಕ್ಕಂತೆ ದರ ಹೆಚ್ಚು ಕಡಿಮೆ ಮಾಡುತ್ತಿರುವ ಅರಿಶಿಣ ಬೀಜ ವ್ಯಾಪಾರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಸಿದ್ದರಾಯ ಭೋಸಗಿ ಮಾತನಾಡಿ, ರೈತರಿಗೆ ರಸಗೊಬ್ಬರ, ಬೀಜ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ರಸಗೊಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಟ ಮಾಡದಂತೆ ಅಂಗಡಿಕಾರರ ಸಭೆ ನಡೆಸಿ ಎಚ್ಚರಿಕೆ ನೀಡಲಾಗುವುದು. ಅಂಗಡಿಕಾರರು ರೈತರಿಂದ ಹೆಚ್ಚಿನ ದರ ಪಡೆದರೆ ಪರವಾನಗಿ ರದ್ದು ಮಾಡಲಾಗುವುದು. ಅರಿಶಿಣ ಬೀಜಕ್ಕೆ ಹೆಚ್ಚುವರಿ ಹಣ ತೆಗೆದುಕೊಂಡರೆ ದಾಳಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತ ಸಂಘದ ಜಿಲ್ಲಾ ಸಂಚಾಲಕ ಕಿರಣ ಮಿಸಾಳ, ಸಂಗಪ್ಪ ಕರಿಗಾರ, ರಮೇಶ ಕುಂಬಾರ, ಬಾಹುಬಲಿ ಸಂಕನ್ನವರ, ದುಂಡಪ್ಪ ತನ್ನಂಗಿ, ದಗಡು ಮಶಾಳ, ಬಸವರಾಜ ಜಗದಾಳ, ಮಹಾದೇವ ಕುಚನೂರ, ಲಕ್ಕಪ್ಪ ಪೂಜಾರಿ, ಮುರಗೆಪ್ಪ ಹೊನವಾಡ, ಶಿವಾನಂದ ಮಗದುಮ್ಮ, ಜಗದೀಶ ಮರೆಗುದ್ದಿ, ಮಹಮ್ಮದ್ ನದ್ಾ, ಮಹಾದೇವ ಹೊನಮನಿ, ಹನುಮಂತ ಮಹಿಷವಾಡಗಿ, ಪಿಂಟು ಕಬಾಡಗಿ, ನಿಂಗಪ್ಪ ಉದ್ದಾನಗೋಳ, ಕೊಕಟನೂರು, ಶಿರಹಟ್ಟಿ, ನಂದಗಾವ, ಹಲ್ಯಾಳ, ರಡ್ಡೇರಹಟ್ಟಿ, ಅಡಹಳ್ಳಿ, ಅಡಹಳ್ಳಟ್ಟಿ ಸೇರಿ ವಿವಿಧ ಗ್ರಾಮಗಳ ರೈತರು ಇದ್ದರು.