ಬೆಳಗಾವಿಯಲ್ಲಿ ಗೋವುಮಾತಾ ಗೌರವ ದಿನದ ಪ್ರಯುಕ್ತ ರ‌್ಯಾಲಿ ನಡೆಸಲಾಯಿತು. ನಿಲೇಶ ಪಾಟೀಲ, ಪ್ರಕಾಶ ಲದ್ವಾ, ಗೋಲ್ವಾನಂದ ಸ್ವಾಮೀಜಿ, ರವಿ ಕೋಕಿತಕರ ಇತರರಿದ್ದರು.
ಬೆಳಗಾವಿ: ಗೋಮಾತಾ ಗೌರವ ದಿನದ ಪ್ರಯುಕ್ತ ನಗರದಲ್ಲಿ ಸೋಮವಾರ ಗೋವು ರಕ್ಷಣೆ ಜಾಗೃತಿಗಾಗಿ ಗೋವು ಸಮೇತ ರ‌್ಯಾಲಿ ಕೈಗೊಳ್ಳಲಾಯಿತು.
ನಗರದ ಅಂಬೇಡ್ಕರ್ ಉದ್ಯಾನದಿಂದ ಆರಂಭಗೊಂಡ ಗೋವು ಮಾತಾ ಗೌರವ ಅಭಿಯಾನ ಸಂಘಟನೆ ನೇತೃತ್ವದ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಗೋವು ಭಕ್ತರು, ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ, ಚನ್ನಮ್ಮ ವೃತ್ತದ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ತೆರಳಿ ಮನವಿ ಸಲ್ಲಿಸಿದರು.
ಗೋವುಗಳಿಗೆ ರಾಷ್ಟ್ರೀಯ ಗೌರವದ ಅಧಿಕೃತ ಸ್ಥಾನ ನೀಡಬೇಕು. ದೇಶಾದ್ಯಂತ ಗೋ ಹತ್ಯೆ ನಿಷೇಧಿಸಬೇಕು. ಗೋವು ಹತ್ಯೆ ಮತ್ತು ಗೋವುಗಳ ಕಳ್ಳ ಸಾಗಣೆಯಲ್ಲಿ ತೊಡಗಿದವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಗೋವು ಕಳ್ಳ ಸಾಗಣೆ ವಾಹನಗಳನ್ನು ಶಾಶ್ವತ ಮುಟ್ಟುಗೋಲು ಹಾಕಿಕೊಳ್ಳಬೇಕು.
ಗೋಮೂತ್ರ ಉತ್ಪನ್ನಗಳನ್ನು ಉತ್ತೇಜಿಸಲು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಬೃಹತ್ ಮಾರಾಟ ಮಳಿಗೆಗಳಲ್ಲಿ ದೇಸಿ ಗೋವಿನ ಹೈನುಗಾರಿಕೆ ಉತ್ಪನ್ನ, ಸಗಣಿ, ಗೋಮೂತ್ರಗಳಿಗೆ ಕಡ್ಡಾಯವಾಗಿ ಕೌಂಟರ್ ರಚಿಸಬೇಕು ಎಂದು ಆಗ್ರಹಿಸಿದರು. ನಿಲೇಶ ಪಾಟೀಲ, ಪ್ರಕಾಶ ಲದ್ವಾ, ರಾಜಸ್ಥಾನದ ಗೋಲ್ವಾನಂದ ಸ್ವಾಮೀಜಿ, ಆನಂದ ನವಲೆ, ಮಾರುತಿ ಕೋಳಿ, ರವಿ ಕೋಕಿತಕರ, ಭರತ ಪಾಟೀಲ, ಕಿರಣ ಗಾವಡೆ ಇತರರಿದ್ದರು.