ಬೆಳಗಾವಿಯಲ್ಲಿ ಶುಕ್ರವಾರ ಸುಳೇಬಾವಿ ರೈಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟಿಸಲಾಯಿತು. 
ಬೆಳಗಾವಿ

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಡಿ.ವಿ. ಕಮ್ಮಾರ
ಬೆಳಗಾವಿ: ತಾಲೂಕಿನ ಸುಳೇಬಾವಿ ಬಳಿಯ ರೈಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆ ದುರಸ್ತಿ ಮಾಡಬೇಕು. ರೈತರ ಜಮೀನಿನ ದಾರಿ ಸುಗಮಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಕರ್ನಾಟಕ ಯುವ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ವೇದಿಕೆ ನೇತೃತ್ವದಲ್ಲಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ರ‌್ಯಾಲಿಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಸುಳೇಬಾವಿ, ಚಂದೂರ ಮತ್ತು ಖನಗಾವ ಗ್ರಾಮಗಳ ಮಧ್ಯದಲ್ಲಿರುವ ಮೇಲ್ಸೇತುವೆ ಕೆಳಗಿರುವ ಸುಳೇಬಾವಿ ರಸ್ತೆ ನವೀಕರಿಸಿಲ್ಲ. ಇದರಿಂದ ಸುಮಾರು 300 ಎಕರೆಯಷ್ಟು ಜಮೀನುಗಳ ಮುಖ್ಯ ಮಾರ್ಗವೆ ಬಂದ್ ಆಗಿದೆ. ಸುಳೆಭಾವಿ ಗ್ರಾಮದೇವತೆ ಜಾತ್ರೆ ಸಮಯದಲ್ಲಿ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ದೇವಿಯ ಜಾತ್ರೆಗೆ ಹೋಗಲು ಅನುಕೂಲಕರವಾಗಿದ್ದು, ಕಳೆದ ವರ್ಷದಿಂದ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿ ನೀಡಿದ್ದು, ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಕಾಶ ದೇಗಾವಿ, ನಬಿಸಾಬ ಸಿಲ್ಲೇದಾರ್, ಶಬ್ಬೀರ್ ಕುದರಿ, ರಾಚಪ್ಪ ಪಾಟೀಲ, ಎಸ್.ಆರ್.ಜಮಾದಾರ, ರೂಪಾ ಪುಂಡಿಬೀಜ, ಮಾಲಾ ಸವದತ್ತಿ ಇತರರಿದ್ದರು.