ಬಸ್ ನಿರ್ವಾಹಕನ ಅನುಚಿತ ವರ್ತನೆ ಖಂಡಿಸಿ ವಿದ್ಯಾರ್ಥಿಗಳು ರಾಮದುರ್ಗದಲ್ಲಿ ಘಟಕ ವ್ಯವಸ್ಥಾಪಕ ಕೆ.ಡಿ.ಅಮ್ಮಣಗಿಗೆ ಮನವಿ ಸಲ್ಲಿಸಿದರು. ಮಹಾಂತೇಶ ಹಂಪಿಹೋಳಿ, ಸಂದೇಶ ಪಟ್ಟಣ, ಮಲ್ಲಿಕಾರ್ಜುನ ಹೊಸಮನಿ, ಅಜಯ ಕೆರೂರ್ ಇತರರಿದ್ದರು.
- ರಾಮದುರ್ಗದಲ್ಲಿ ಘಟಕ ವ್ಯವಸ್ಥಾಪಕರಿಗೆ ಮನವಿ
- ಕ್ರಮಕ್ಕೆ ವಿದ್ಯಾರ್ಥಿಗಳ ಒತ್ತಾಯ
ರಾಮದುರ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ನಿರ್ವಾಹಕ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಹೊಸ ಬಸ್ ನಿಲ್ದಾಣದಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಕರ್ತವ್ಯನಿರತ ನಿರ್ವಾಹಕನೊಬ್ಬ ಬಸ್‌ನಲ್ಲಿ ಟಿಕೆಟ್ ನೀಡುವ ವೇಳೆ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದನ್ನು ಚಿತ್ರಿಕರಣ ಮಾಡಲು ಮುಂದಾದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾನೆ. ನಿರ್ವಾ
ಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಚಾಲಕ ಮಹಾಂತೇಶ ಹಂಪಿಹೋಳಿ ಹಾಗೂ ತಾಲೂಕು ಸಂಚಾಲಕ ಸಂದೇಶ ಪಟ್ಟಣ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಕೆಲ ಸಿಬ್ಬಂದಿ ಅಸಭ್ಯವಾಗಿ ವರ್ತಿಸುತ್ತಿರುವುದು ಖೇದಕರ ಸಂಗತಿ. ಮುಂಬರುವ ದಿನಗಳಲ್ಲಿ ಸಾರಿಗೆ ಸಿಬ್ಬಂದಿ ವರ್ತನೆ ಬದಲಾಗದಿದ್ದಲ್ಲಿ ತೀವ್ರ ಪ್ರತಿಭಟನೆ ಕೈಗೊಳ್ಳಲಾಗವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಘಟಕ ವ್ಯವಸ್ಥಾಪಕ ಕೆ.ಡಿ.ಅಮ್ಮಣಗಿ ಹಾಗೂ ಪೊಲೀಸರು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿದರು. ನಿರ್ವಾಹಕನ ಕ್ಷಮೆಯಾಚನೆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಮಲ್ಲಿಕಾರ್ಜುನ ಹೊಸಮನಿ, ಅಜಯ ಕೆರೂರ್, ಅಜಯ ಹೂಲಿ, ಮೋಹಿತ್ ರಾಯಬಾಗ, ಆಕಾಶ ಸಾವಂತ, ಪ್ರದೀಪ ಮೂಕಾರಿ, ಭರತ ಕಲಾಲ, ಪ್ರೇಮ್ ೋರ್ಪಡೆ, ಶಿವಪ್ರಕಾಶ ಹಡಪದ, ಬಸವರಾಜ ಕನ್ನೂರ ಇತರರಿದ್ದರು.