ಸಂಗೊಳ್ಳಿ ಗ್ರಾಮದ ಹೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು. ಬಸವರಾಜ ಅಕ್ಕೊಳ್ಳಿ, ಬಸವರಾಜ ಆನೆಮಠ ಇತರರಿದ್ದರು. 
ಬೆಳಗಾವಿ

ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಅರ್ಚನಾ ಜಾಧವ

ಪ್ರಮುಖ ಮುಖ್ಯಾಂಶಗಳು

  • ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
  • ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಬೈಲಹೊಂಗಲ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ರೈತರು ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಿಬ್ಬಂದಿ ಹೊರಹಾಕಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಶನಿವಾರ ಪ್ರತಿಭಟನೆ ನಡೆಸಿದರು.
ರೈತರಾದ ಬಸವರಾಜ ಅಕ್ಕೊಳ್ಳಿ, ಬಸವರಾಜ ಆನೆಮಠ, ಮಡಿವಾಳಪ್ಪ ಉರಬಿನ ಹಾಗೂ ವಕೀಲ ಉಮೇಶ ಲಾಳ ಮಾತನಾಡಿ, ಪ್ರತಿದಿನ ಅರ್ಧ ಗಂಟೆ ಮಾತ್ರ ನೀರು ಪೂರೈಸುತ್ತಿದ್ದು, ಸಮರ್ಪಕ ವಿದ್ಯುತ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಹೀಗೆ ಪರಿಸ್ಥಿತಿ ಮುಂದುವರಿದರೆ ನಮಗಾಗುವ ನಷ್ಟ ಭರಿಸುವವರಾರು?. ಕೂಡಲೇ ರೈತರ ಬೆಳೆಗಳಿಗೆ ವ್ಯವಸ್ಥಿತ ನೀರು ಪೂರೈಸಬೇಕು. ಇಲ್ಲವಾದಲ್ಲಿ ಕಚೇರಿ ಬಂದ್ ಮಾಡಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಶಾಖಾಧಿಕಾರಿ ಅರವಿಂದ ಆರೂರ ಹಾಗೂ ಮಾರುತಿ ಭೊವಿ ಅವರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿ, ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಪಟ್ಟು ಹಿಡಿದರು. ಬೆಳಗ್ಗೆ 6 ಗಂಟೆ ವರೆಗೆ ವಿದ್ಯುತ್ ನೀಡುವ ಅಧಿಕಾರಿಗಳ ಭರವಸೆಯಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ಸುರೇಶ ಕುರಿ, ಬಾಳಪ್ಪ ವಾರದ, ಚಂಬಣ್ಣ ಕೊಡೂಳ್ಳಿ, ಹೊನ್ನಪ್ಪ ಮಿಸಿಗೇರ, ರಾಯಪ್ಪ ಅಂಬಿಗೇರ, ಶಿವಾನಂದ ದುರಗುಂಟಿ, ರಾಜು ಕೊಡ್ಲಿ, ಜಗದೀಶ ಕೊಡೂಳ್ಳಿ, ವೀರೇಶ ಅರಳಿಕಟ್ಟಿ, ರಾಯಪ್ಪ ಹೆಗಡೆ, ಸೋಮನಿಂಗ ಬೆಟಗೇರಿ, ಅದೃಶಪ್ಪ ಕುರಿ, ಈರಣ್ಣ ಚಂದರಗಿ, ಗಂಗಾಧರ ಹಿರೇಮಠ, ನಾಗಪ್ಪ ವಾರದ, ನಿಂಗಪ್ಪ ಹಕ್ಕಿ, ಬಾಳಪ್ಪ ಪತ್ತಾರ, ಯಲ್ಲಪ್ಪ ಕುರಿ, ಪ್ರಕಾಶ ಕಂಬಿ ಇತರರಿದ್ದರು.